ಲೈಫ್‌ಸ್ಟೈಲ್

ನಾನಿನ್ನು ಬದುಕಿದ್ದು ಪ್ರಯೋಜನವೇನು? ಅನ್ನೋ ಪ್ರಶ್ನೆ ಕಾಡ್ತಿದೆಯಾ? - ಇದನ್ನೊಮ್ಮೆ ಓದಿ

chandru

ಇತ್ತೀಚಿನ ದಿನಗಳಲ್ಲಿ ಪದೇಪದೆ ಕಿವಿಗಪ್ಪಳಿಸುವ ಸುದ್ದಿ ಆತ್ಮಹತ್ಯೆಗಳದ್ದು. ಬ್ರಿಟನ್​ನ ಮೈಂಡ್​ಫುಲ್​ನೆಸ್ ಕೋಚ್​ ರಾಗೇಶ್ವರಿ ಹೇಳ್ತಾರೆ ಈ ಆತ್ಮಹತ್ಯೆಗಳ ಹಿಂದಿದೆ ಒಂದು ಸೈನ್ಸ್​. ಆತ್ಮಹತ್ಯೆ ಮಾಡಬೇಕೆಂಬ ನಿರ್ಧಾರ ತೆಗೆದುಕೊಳ್ಳಲು ಹಲವು ಕಾರಣಗಳಿರಬಹುದು. ಹಣಕಾಸಿನ ಬಿಕ್ಕಟ್ಟಿನಿಂದ ಹಿಡಿದು ಸಂಕಟಮಯ ಆರೋಗ್ಯಸಮಸ್ಯೆಗಳ ತನಕ ಮತ್ತು ವೈಯಕ್ತಿಕ ತೊಂದರೆಗಳೂ ಕಾರಣಗಳಿರಬಹುದು.

ಆದರೆ ಸೈಕಾಲಜಿಸ್ಟ್​ಗಳು ಇದರಲ್ಲಿ ಒಂದು ಸಾಮಾನ್ಯ ಅಂಶವನ್ನು ಪತ್ತೆಹಚ್ಚಿದ್ದಾರೆ. ಅದು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾ ಇದೆ. ಅರ್ಥಪೂರ್ಣ ಸಾಮಾಜಿಕ ಸಂಪರ್ಕದ ಕೊರತೆಯ ಅಂಶವದು. ಆತ್ಮಹತ್ಯೆ ಮಾಡೋದಕ್ಕೆ ಪ್ರಯತ್ನಿಸಿದವರನ್ನು ಯಾರ್ಯಾರನ್ನು ಬಚಾವ್ ಮಾಡಲಾಗಿದೆಯೋ ಅವರೆಲ್ಲರದ್ದು ಒಂದೇ ರೀತಿಯ ಚಿಂತನೆಯಾಗಿತ್ತು. ಈ ಜಗತ್ತಿನ ಒಗಟನ್ನು ತಪ್ಪಾಗಿ ಅರ್ಥಮಾಡಿಕೊಂಡು, ಒಂದು ಹೊರೆ, ನಾನು ಬದುಕುವುದರಲ್ಲಿ ಅರ್ಥ ಇಲ್ಲವೆಂಬ ಭಾವನೆಯಿಂದ ತಪ್ಪು ಕಲ್ಪನೆಯ ಭಾವನೆ ಅದು. ಆದ್ದರಿಂದ ನಮ್ಮ ಪ್ರೀತಿಪಾತ್ರರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಉತ್ತಮ ರೀತಿಯಲ್ಲಿ ಹೇಗೆ ತಪ್ಪಿಸಬಹುದು?

ಮೊದಲನೆಯದಾಗಿ, ಯಾರು ಖಿನ್ನತೆಗೆ ಒಳಗಾಗಿರುತ್ತಾರೋ ಅಥವಾ ಮನಸ್ಸಿನೊಳಗೆ ಸಂಘರ್ಷಕ್ಕೆ ಒಳಗಾಗಿರುತ್ತಾರೋ ಅಂದರೆ ನಾನು ಇನ್ನು ಬದುಕುವುದು ವೇಸ್ಟ್ ಎಂದೋ ಅಥವಾ ನನ್ನ ಸಮಸ್ಯೆಗೆ ಪರಿಹಾರವೇ ಇಲ್ಲ ಎಂಬ ಭಾವನೆಗೆ ಒಳಗಾಗಿರುತ್ತಾರೋ ಅಂಥವರು ಕಠಿಣ ನಿಲುವು ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿರುತ್ತಾರೆ. ಅಂತಹ ಸನ್ನಿವೇಶದಲ್ಲಿ ನಿಮ್ಮ ಬಳಿ ಬರುತ್ತೇವೆ ಎಂದು ಹೇಳುವ ಮೊದಲೇ ಅವರಿಗೆ ನೆರವು ನೀಡುವ ಭರವಸೆ ಕೊಡಿ. ಅವರ ನಿರ್ಧಾರ ಮರುಪರಿಶೀಲಿಸುವಂತೆ ಮಾಡಿ.

ಅವರೇ ನಮ್ಮ ಬಳಿ ಬಂದು ಸಹಾಯ ಕೇಳಲಿ ಎಂದು ಕಾಯುತ್ತ ಕೂರಬೇಡಿ. ಅವರು ಸಹಾಯ ಕೇಳಲು ಬರಲ್ಲ. ಹಾಗಾಗಿ ನಮ್ಮ ಮೇಲಿನ ಹೊಣೆಗಾರಿಕೆ ಏನು ಗೊತ್ತ- ನಾವು ಯಾವಾಗಲೂ ಪಾಸಿಟಿವ್ ಆಗಿದ್ದೇವೆ ಎಂದು ಹೇಳುವುದಲ್ಲ. ಹಾಗೆ ವರ್ತಿಸುವುದು. ಆ ಮೂಲಕ ಅವರಲ್ಲಿ ಧೈರ್ಯ ತುಂಬುವುದು. ಅಪಾಯಕಾರಿ ಸಂದರ್ಭ ಎದುರಾದಾಗ ಅದನ್ನು ಗುರುತಿಸುವುದು ಅವಶ್ಯ. ಅಂಥವರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ಎಸ್​ಎಂಎಸ್ ಮಾಡಿ, ವಾಟ್ಸ್​ಆ್ಯಪ್ ಚಾಟ್ ಮಾಡಿ. ಫೋನ್ ಮಾಡಿ ಅಥವಾ ನಿಯತವಾಗಿ ಭೇಟಿ ಮಾಡಿ ಸುಖ ದುಃಖಗಳನ್ನು ಹಂಚಿಕೊಳ್ಳಿ. ಸಮಯ ಸಂದರ್ಭ ನೋಡಿಕೊಂಡು ಈಗ ಹೇಗಿದೆ ಚಿಂತನಾ ಲಹರಿ ಎಂದೂ ಕೇಳಿ ನೋಡಿ. ಅಗತ್ಯವಿದ್ದಲ್ಲಿ ವೃತ್ತಿಪರರ ನೆರವನ್ನೂ ಪಡೆಯಿರಿ.

ಎರಡನೇಯದಾಗಿ ಸೋಷಿಯಲ್ ಮೀಡಿಯಾದಲ್ಲಿ ನೀವು ಯಾರನ್ನು ಫಾಲೋ ಮಾಡ್ತೀರಿ ಎಂಬುದೂ ಪ್ರಾಮುಖ್ಯತೆ ಪಡೆಯುತ್ತದೆ. ಇನ್ನೊಬ್ಬ ವ್ಯಕ್ತಿಗೆ ನೀವು ಕೊಡಬಹುದಾದ ಅತ್ಯಂತ ಪ್ರಮುಖ ವಿಚಾರ ಎಂದರೆ ನಿಮ್ಮ ಗಮನ. ನಮ್ಮ ಬಗ್ಗೆ ಗಮನಹರಿಸಿದ ವ್ಯಕ್ತಿಯನ್ನು ಫಾಲೋ ಮಾಡುವ ಬದಲು ನಮ್ಮನ್ನು ಯಾರು ಇಷ್ಟಪಡುತ್ತಾರೋ ಅವರನ್ನು ಅನುಸರಿಸುವುದು ಹೆಚ್ಚು ಸೂಕ್ತವಾದ ವಿಚಾರ. ಈ ನಿಟ್ಟಿನಲ್ಲಿ ದುರ್ಬಲ ಮನಸ್ಸಿನವರ ಮೇಲೆ ನಿಗಾ ಇರಿಸಬೇಕು.

ನಿಮ್ಮ ಪ್ರೊಫೈಲ್​ ಒಮ್ಮೆ ಸ್ಕ್ರೋಲ್ ಮಾಡಿ ನೋಡಿ. ನೀವು ಯಾರನ್ನು ಫಾಲೋ ಮಾಡ್ತಾ ಇದ್ದೀರಿ ಅಂತ. ಅದರಲ್ಲಿ ನಿಮ್ಮ ಮನಸ್ಸಿಗೆ ಪ್ರೇರಣೆ ನೀಡುವ, ಶಕ್ತಿಶಾಲಿ ಸಂದೇಶ ನೀಡುವ, ಉತ್ತಮ ಚಿಂತನೆಗಳು ಇಲ್ಲದ ಪೋಸ್ಟ್​ಗಳನ್ನು ಯಾರಾದರೂ ಹಾಕುತ್ತಿದ್ದರೆ ಅಂಥವರನ್ನು ಯಾವುದೇ ಮುಲಾಜಿಲ್ಲದೆ ಅನ್​ಫಾಲೋ ಮಾಡಿ. ಒಟ್ಟಾರೆಯಾಗಿ ಸೋಷಿಯಲ್ ಮೀಡಿಯಾದ ಬಳಕೆಯನ್ನು ಕಡಿಮೆಮಾಡಿ. ಸೋಷಿಯಲ್ ಮೀಡಿಯಾ ಅಂದರೆ ಅಲ್ಲಿ ಎಲ್ಲವೂ ಹೋಲಿಕೆಯೊಂದಿಗೇ ನಡೆದು ಬಿಡುತ್ತದೆ. ಕೆಲವರಿಗೆ ಅಲ್ಲಿ ಇನ್​ಫೀರಿಯಾರಿಟಿ ಕಾಡಬಹುದು. ಇನ್ನು ಕೆಲವರಿಗೆ ಅಲ್ಲಿ ಸುಪೀರಿಯಾರಿಟಿ ಕಾಡಬಹುದು. ಅಲ್ಲಿ ಇಬ್ಬರೂ ಸಹಾಯ ಮಾಡಲಾರರು. ಇಬ್ಬರೂ ಆರೋಗ್ಯ ಪೂರ್ಣ ಜೀವನ ನಡೆಸಲಾರರು.

ಮೂರನೇಯದಾಗಿ, ಶಿಕ್ಷಣ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಬೇಕು. ನಾವು ನಮ್ಮ ಮಕ್ಕಳಿಗೆ ಇತಿಹಾಸ, ಭೂಗೋಳ ಶಾಸ್ತ್ರ, ಗಣಿತವನ್ನು ಹೇಳಿಕೊಡುತ್ತೇವೆ. ಆದರೆ, ನಮ್ಮ ಮಕ್ಕಳಿಗೆ ಲೈಫ್ ಸ್ಕಿಲ್​ ಬಗ್ಗೆ ಹೇಳಿಕೊಡುವುದೇ ಇಲ್ಲ. ನದಿಯ ಉದ್ದ, ಯುದ್ಧಗಳ ದಿನಾಂಕಗಳ ವಿಚಾರದಲ್ಲಿ ನಾವು ವಯಸ್ಕರೇನಾದರೂ ಸಮಸ್ಯೆಗಳನ್ನು ಎದುರಿಸಿದ್ದೇವೆಯೇ? ನಾವು ನಿತ್ಯಬದುಕಿನಲ್ಲಿ ಎದುರಿಸುವ ಸಮಸ್ಯೆಗಳೆಲ್ಲವೂ ತಿರಸ್ಕಾರದ್ದು. ಸ್ವಾಭಿಮಾನ, ಸ್ವಯಂ ಮೌಲ್ಯ, ಹೊಂದಾಣಿಕೆ, ನಮ್ಮ ಮೇಲೆಯೆ ಇರಬೇಕಾದ ನಂಬಿಕೆಯದ್ದು. ಇವುಗಳ ಬಗ್ಗೆಯೇ ನಾವು ಮಕ್ಕಳಿಗೆ ಕಲಿಸಬೇಕಾದ್ದು. ಪೂರ್ಣತೆ, ವಿಶಿಷ್ಟತೆ ಮತ್ತು ಪರಿಪೂರ್ಣತೆ ನಮ್ಮೊಳಗೇ ಇದೆ. ಅದು ಹೊರಗಲ್ಲ. ಅದನ್ನು ಇನ್ನಾರೋ ಮೂರನೆಯವರು ಕೊಡುವುದಕ್ಕೋ, ತುಂಬುವುದಕ್ಕೋ ಸಾಧ್ಯವಿಲ್ಲ ಎಂಬುದನ್ನು ಅವರಿಗೆ ತಿಳಿಹೇಳಬೇಕು. ಯಾವಾಗ ಮಕ್ಕಳಿಗೆ ಬಾಲ್ಯದಲ್ಲೇ ಅವರ ಬೆಲೆ, ಸ್ಥಿತಿಸ್ಥಾಪಕತ್ವದ ಮಹತ್ವವನ್ನು ತಿಳಿಸಿಕೊಟ್ಟರೆ ಅದುವೆ ಅತ್ಯುತ್ತಮ ಪಾಠವಾಗಿದ್ದು ಬದುಕಿನುದ್ದಕ್ಕೂ ಬಳಸಿಕೊಳ್ಳುತ್ತಾರೆ.

ನಾಲ್ಕನೇಯದಾಗಿ, ಯಾರು ಮನಸ್ಸಿನೊಳಗೆ ಯಾವ ರೀತಿ ಸಂಘರ್ಷಕ್ಕೆ ಒಳಗಾಗಿರುತ್ತಾರೋ ಯಾರಿಗೆ ಗೊತ್ತು? ಆದ್ದರಿಂದ ಎಲ್ಲ ಸಮಯ ಸಂದರ್ಭಗಳಲ್ಲೂ ಯಾವುದೇ ಷರತ್ತುಗಳಿಲ್ಲದೇ ಕರುಣೆ ಮತ್ತು ಸಹಾನುಭೂತಿ ಉಳ್ಳವರಾಗಿ. ಸುಮ್ಮನೆ ಹಾಗೆ ಒಮ್ಮೆ ಅವಲೋಕನ ಮಾಡಿಕೊಳ್ಳಿ- ಅವರಿಂದ ನಮಗೇನೂ ಉಪಯೋಗ ಇಲ್ಲ ಎಂದರೆ ನಮಗೆ ಪರಿಚಿತರು ಕಳುಹಿಸಿದ ಮೆಸೇಜ್​, ಇಮೇಲ್​ಗಳಿಗೆ ಸ್ಪಂದಿಸುತ್ತೇವೆ. ಅವರಿಗೆ ಉತ್ತರ ಕಳುಹಿಸುತ್ತೇವೆ? ವಿಶೇಷವಾಗಿ ಅಪರಿಚಿತರ ಸಂದೇಶ, ಇಮೇಲ್​ಗಳನ್ನೂ ಪರಿಗಣಿಸಿ. ಮನಸ್ಸಿಗೆ ಹೌದು ಅನಿಸಿದರೆ ಸರಿಯಾದ ದಾರಿಯಲ್ಲಿ ಸಾಗಲು ಇದೊಂದು ನಿಮಿತ್ತ. ಕರುಣೆ ಮತ್ತು ಸಹಾನುಭೂತಿ ಉಳ್ಳವರಾಗಿ ಎಲ್ಲರಿಗೂ ಪ್ರೀತಿ ಹಂಚೋಣ..