More

    ನಿನ್ನ ಮನದಾಳದ ನೋವು ಬಲ್ಲೆ- ಸುಶಾಂತ್​ಗೆ ಅಕ್ಕನಿಂದ ಭಾವುಕ ಪತ್ರ….

    ನವದೆಹಲಿ: ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ರನ್ನು ನೆನೆದು ಭಾವುಕರಾಗಿರುವ ಅವರ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಸಹೋದರನಿಗಾಗಿ ಒಂದು ಪತ್ರ ಬರೆದು ಪೋಸ್ಟ್​ ಹಾಕಿದ್ದಾರೆ.
    ಅಮೆರಿಕದಲ್ಲಿ ನೆಲೆಸಿರುವ ಶ್ವೇತಾ ತವರೂರು ಪಾಟ್ನಾಗೆ ಆಗಮಿಸಿದ್ದು, ಸಹೋದರನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

    ಅವರು ಬರೆದಿರುವ ಪತ್ರದಲ್ಲಿ ಹೀಗಿದೆ:
    ‘ನನ್ನ ಬೇಬಿ, ನನ್ನ ಬಾಬು, ನನ್ನ ಮಗುವೇ… ನೀನು ಇಂದು ನಮ್ಮೊಂದು ದೈಹಿಕವಾಗಿ ಇಲ್ಲ. ನಿನ್ನ ಮನದಾಳದಲ್ಲಿ ಅಪಾರ ನೋವು ತುಂಬಿಸಿಕೊಂಡಿದ್ದೆ ಎನ್ನುವುದನ್ನು ನಾನು ಬಲ್ಲೆ. ಅಷ್ಟೂ ನೋವನ್ನು ನೀನೊಬ್ಬನೇ ನುಂಗುವ ಬದಲು ನನಗೂ ಆ ನೋವನ್ನು ಕೊಟ್ಟಿದ್ದರೆ, ಎಲ್ಲಾ ನೋವನ್ನು ನಾನೇ ಪಡೆದು ನಿನಗೆ ಕೇವಲ ಸಂತೋಷ ಹಂಚುತ್ತಿದ್ದೆ.

    ನೀನು ದೈಹಿಕವಾಗಿ ನಮ್ಮೊಂದಿಗೆ ಇಲ್ಲ. ಇರುವಷ್ಟು ದಿನ ನೋವಿನಿಂದ ಇದ್ದರೂ ಹೋರಾಟ ಮಾಡಿದೆ. ಧೈರ್ಯದಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಕ್ಷಮಿಸಿಬಿಡು ಬಂಗಾರ…. ನೀನು ಅನುಭವಿಸಿದ ನಿನ್ನೆಲ್ಲ ನೋವುಗಳಿಗಾಗಿ ನಮ್ಮನ್ನು ಕ್ಷಮಿಸಿಬಿಡು.

    ನಕ್ಷತ್ರದಂತೆ ಮಿಂಚುವ ನಿನ್ನ ಕಣ್ಣುಗಳು ಕನಸನ್ನು ಹೇಗೆ ಕಾಣಬೇಕೆಂಬುದನ್ನು ಜಗತ್ತಿಗೆ ಕಲಿಸಿದವು. ನಿನ್ನ ಮುಗ್ಧ ನಗುವು ನಿನ್ನ ಹೃದಯದ ನಿಷ್ಕಲ್ಮಷವಾಗಿತ್ತು. ನನ್ನ ಕಂದನೆ… ನಿನ್ನನ್ನು ನಾನಷ್ಟೇ ಅಲ್ಲದೇ ಎಲ್ಲರೂ, ಎಂದೆಂದಿಗೂ ಪ್ರೀತಿಸುತ್ತೇವೆ. ಇನ್ನೂ ಹೆಚ್ಚಿನವಾದ ಪ್ರೀತಿಸುತ್ತೇವೆ. ನೀರು ಎಲ್ಲೇ ಇದ್ದರೂ ಅಲ್ಲಿ ಸಂತೋಷವಾಗಿಯೇ ಇರು, ಸಂಪೂರ್ಣವಾಗಿ ಸಂತುಷ್ಟನಾಗಿರು. ನೀನು ಎಲ್ಲಿದ್ದರೂ ಅಲ್ಲಿಯವರು ನಿನ್ನನ್ನು ಅಷ್ಟೇ ಪ್ರೀತಿಸುತ್ತಾರೆ, ಅಷ್ಟೇ ಇಷ್ಟಪಡುತ್ತಾರೆ ಎಂದು ಬರೆದಿದ್ದಾರೆ.

    ಇದನ್ನೂ ಓದಿಆಲಿಯಾ ಭಟ್​ ವಿರುದ್ಧ ಟ್ವೀಟ್​ ಮೂಲಕ ಭಾರಿ ಕೋಪ ವ್ಯಕ್ತಪಡಿಸಿದ್ದರು ಸುಶಾಂತ್​ ಸಿಂಗ್​

    ಅಭಿಮಾನಿಗಳಿಗೂ ಶ್ವೇತಾ ಮಾತು:
    ನಂತರ ಸುಶಾಂತ್​ರ ಅಸಂಖ್ಯ ಅಭಿಮಾನಿಗಳನ್ನು ಉದ್ದೇಶಿಸಿ ಅನಿಸಿಕೆ ಹಂಚಿಕೊಂಡಿರುವ ಶ್ವೇತಾ,
    ನನ್ನ ಪ್ರೀತಿ ಪಾತ್ರರೇ, ಇದು ಅತ್ಯಂತ ಸಂಕಷ್ಟದ ಸಮಯ. ದ್ವೇಷದ ವಿರುದ್ಧ ನೀವು ಸದಾ ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳಿ. ಕೋಪ ಮತ್ತು ಅಸಮಾಧಾನಕ್ಕಿಂತ ದಯೆ ಮತ್ತು ಸಹಾನುಭೂತಿಯನ್ನು ಆರಿಸಿಕೊಳ್ಳಿ, ಸ್ವಾರ್ಥಕ್ಕಿಂತ ಹೆಚ್ಚಾಗಿ ನಿಸ್ವಾರ್ಥತೆಯನ್ನು ಆರಿಸಿಕೊಳ್ಳಿ ಮತ್ತು ಜನರನ್ನು ಕ್ಷಮಿಸಿ ಎಂದಿದ್ದಾರೆ.

    ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಹೋರಾಟಗಳಲ್ಲಿ ನಿರತರಾಗಿರುವುದು ನಿಜ. ಏನೇ ಆಗಲಿ, ಮೊದಲು ನಿಮ್ಮ ಬಗ್ಗೆ ನೀವೇ ಸಹಾನುಭೂತಿ ಹೊಂದಿರಬೇಕು. ನಂತರ ಎಲ್ಲರಿಗೂ ಸಹಾನುಭೂತಿ ತೋರಿಸಿ. ಯಾವುದೇ ಹಂತದಲ್ಲೂ, ಯಾವುದೇ ಕಾರಣಕ್ಕೂ ನಿಮ್ಮ ಹೃದಯವನ್ನು ನಿರ್ಬಂಧಕ್ಕೆ ಒಡ್ಡಿಕೊಳ್ಳಬೇಡಿ ಎಂದಿದ್ದಾರೆ.

    Mera baby, mera Babu mera Bachcha is not physically present with us anymore and it is ok… I know u were in a lot of…

    Shweta Singh Kirti ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಜೂನ್ 17, 2020

    ಮೌನ ಮುರಿದ ಪ್ರಧಾನಿ: ಇಚ್ಛಿಸಿದರೆ ಶಾಂತಿ, ಪ್ರಚೋದಿಸಿದರೆ ತಕ್ಕಶಾಸ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts