More

    ಜಾತಿ ಪ್ರಮಾಣ ಪತ್ರ ಬೇಗ ಒದಗಿಸಲಿ

    ಚಿಕ್ಕೋಡಿ: ತಾಲೂಕಿನಲ್ಲಿ ವಾಸಿಸುವ ದೇವಾಂಗರಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಹಾಗೂ ಇನ್ನುಳಿದ ಪ್ರಮಾಣ ಪತ್ರಗಳನ್ನು ಪೂರೈಸುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ದೇವಾಂಗ ಸಮುದಾಯದ ತಾಲೂಕಾಧ್ಯಕ್ಷ ಮಹಾದೇವ ವರೂಟೆ ನೇತತ್ವದಲ್ಲಿ ತಹಸೀಲ್ದಾರ್ ಸಿ.ಎಸ್.ಕುಲಕರ್ಣಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

    ಮಹಾದೇವ ವರುಟೆ ಮಾತನಾಡಿ, ದೇವಾಂಗರಿಗೆ ವಿವಿಧ ಹೆಸರಿನಿಂದ ಕರೆಯಲಾಗುತ್ತದೆ ನೀಲಗಾರ, ಅಂಗಾಯತ ನೀಲಗಾರ, ದೇವಾಂಗ, ಕೋಹಟಗಾರ, ವಿನಕಾರ, ನೇಕಾರ, ಜಾಡರ, ಜಾಡರು ಎಂದು ರಾಜ್ಯ ಸರ್ಕಾರ ಗುರುತಿಸಿದೆ. ಶಾಲೆ ದಾಖಲಾತಿಗಳಲ್ಲಿ ಹಾಗೂ ಇನ್ನಿತರ ದಾಖಲೆಗಳಲ್ಲಿ ಜಾತಿಯನ್ನು ಬೇರೆ ಬೇರೆ ಪದಗಳಲ್ಲಿ ಸಮೂದಿಸಿರುತ್ತಾರೆ.

    ತಹಸೀಲ್ದಾರ್ ಕಾರ್ಯಾಲಯದಿಂದ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಮತ್ತು ಇನ್ನಿತರ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಹರಿರುತ್ತಾರೆ. ಆದರೆ, ತಹಸೀಲ್ದಾರ್ ಕಚೇರಿಯಲ್ಲಿ ಪೂರ್ವಜರ ಜಾತಿ ಪ್ರಮಾಣ ಪತ್ರ ಹಾಜರು ಮಾಡಿದ ನಂತರ ಪರಿಗಣಿಸಲಾಗುವುದು ಎಂದು ಹೇಳುತ್ತಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಮತ್ತು ಇನ್ನಿತರ ಕಾರ್ಯಗಳಿಗೆ ಹಿನ್ನಡೆ ಉಂಟಾಗಿ ನಮಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಖಂಡರಾದ ರವೀಂದ್ರ ಅಕ್ಕತಂಗೇರಹಾಳ, ಕಲ್ಲಪ್ಪ ಅಂಬಲೆ, ರಾಜೇಂದ್ರ ಗುಲಗುಂಜಿ, ಶಂಕರ ಕೆರೂರೆ, ಕುಮಾರ ಪಾಟೀಲ,ದಯಾನಂದ ಮುಸಂಡಿ, ಅರುಣ ಯರಂಡೋಳೆ, ಉತ್ತಮ ನೇಜೆ, ಶ್ರೀನಿವಾಸ ಕಾಗಲೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts