ಆಲಿಯಾ ಭಟ್​ ವಿರುದ್ಧ ಟ್ವೀಟ್​ ಮೂಲಕ ಭಾರಿ ಕೋಪ ವ್ಯಕ್ತಪಡಿಸಿದ್ದರು ಸುಶಾಂತ್​ ಸಿಂಗ್​

Alia Bhatt
Published on

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಇಡೀ ಬಾಲಿವುಡ್​ ಚಿತ್ರರಂಗವನ್ನು ತಲ್ಲಣಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪ-ಪ್ರತ್ಯಾರೋಪ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಕೆಲವರ ವಿರುದ್ಧ ದೂರು ದಾಖಲಾಗಿದ್ದು, ಕಾರ್ಯಕ್ರಮವೊಂದರಲ್ಲಿ ಸುಶಾಂತ್​ ಸಿಂಗ್​ ವಿರುದ್ಧ ಮಾತನಾಡಿದ್ದ ಆಲಿಯಾ ಭಟ್​ ವಿರುದ್ಧವೂ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಯ ನಡುವೆ ಸುಶಾಂತ್​ ಹಾಗೂ ಆಲಿಯಾ ಭಟ್​ ಕುರಿತು ಕುತೂಹಲಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಸುಶಾಂತ್​ ಅಭಿನಯದ ರಾಬ್ತಾ ಚಿತ್ರಕ್ಕೆ ಕೃತಿ ಸೆನನ್​ ಬದಲು ಮೊದಲು ಆಲಿಯಾ ಭಟ್​ ಆಯ್ಕೆಯಾಗಿದ್ದರಂತೆ? ಆದರೆ, ಈ ಚಿತ್ರವನ್ನು ಡೇಟ್​ ಹೊಂದಾಣಿಗೆ ಕಾರಣದಿಂದ ತೊರೆದಿದ್ದಕ್ಕೆ 2015ರಲ್ಲಿ ಆಲಿಯಾ ಭಾರಿ ಸುದ್ದಿಯಾಗಿದ್ದರು. ಇದನ್ನೂ ಓದಿ: ಮಹೇಶ್ ಎದುರು ಕನ್ನಡ ಸ್ಟಾರ್: ​ಪ್ರಿನ್ಸ್ ಜತೆ ನಟಿಸಲಿರುವ ನಟ ಯಾರು?

ಆದರೆ ಮೂಲಗಳ ಪ್ರಕಾರ ಆಗ ತಾನೇ ರಾಬ್ತಾ ಚಿತ್ರ 4 ತಿಂಗಳ ಪ್ರೀ ಪ್ರೊಡಕ್ಸನ್​ ಹಂತದಲ್ಲಿ ಇತ್ತು. ನಿರ್ದೇಶಕ ಹೋಮಿ ಆದ್ಜಾನಿಯಾ ನಿರಂತರವಾಗಿ ಸ್ಕ್ರಿಪ್ಟ್​ ಬರೆಯುತ್ತಿದ್ದರು. ಎಲ್ಲ ಕೆಲಸವು ಮಾರ್ಚ್​ನಲ್ಲಿ ಮುಗಿಯಿತು. ಮೇ ತಿಂಗಳಲ್ಲಿ ಸಿನಿಮಾ ಆರಂಭವಾಗಬೇಕು ಎನ್ನುವಷ್ಟರಲ್ಲಿ ಆಲಿಯಾ ಚಿತ್ರತಂಡದಿಂದ ಆಚೆ ಬಂದಿದ್ದರು. ಆ ವೇಳೆ ಆಲಿಯಾಗೆ ಯಾವುದೇ ಡೇಟ್​ ಇರಲಿಲ್ಲ. ತಮ್ಮ ಮಾರ್ಗದರ್ಶಕರ ನಿರ್ಮಾಣದ ಶುದ್ಧಿ ಚಿತ್ರದಲ್ಲಿ ತೊಡಗಿಸಿಕೊಂಡರು. ಸ್ಟುಡೆಂಟ್​ ಆಫ್​​ ದಿ ಇಯರ್​ ಮತ್ತು ಹಂಪ್ಟಿ ಕಿ ದುಲೇನಿಯಾ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದ ವರುಣ್​ ಧವನ್​ ಜತೆ ಆಲಿಯಾ ಅಭಿನಯಿಸಲು ಮುಂದಾದರು.

ಇತ್ತ ರಾಬ್ತಾ ಚಿತ್ರದಿಂದ ಆಲಿಯಾ ಹೊರಬರುತ್ತಿದ್ದಂತೆ ಸುಶಾಂತ್​ ಸಿಂಗ್​ ರಜಪೂತ್​ ಆಲಿಯಾ ವಿರುದ್ಧ ಕೋಪಗೊಂಡಿದ್ದರು. ಅಲ್ಲದೇ ಟ್ವೀಟ್​ ಮೂಲಕವು ಆಕ್ರೋಶ ವ್ಯಕ್ತಪಡಿಸಿದ್ದರು. 2015, ಜೂನ್​ 2ರಂದು ಟ್ವೀಟ್​ ಮಾಡಿದ್ದ ಸುಶಾಂತ್​, ವೈಯಕ್ತಿಕ ಲಾಭಕ್ಕಾಗಿ ಕೆಲ ಜನರು ಇತರರ ಪ್ರಾಜೆಕ್ಟ್​ ಅನ್ನು ಹೇಗೆ ನಾಶಮಾಡಿಬಿಡುತ್ತಾರೆ ಎಂಬುದು ತಮಾಷೆಯಾಗಿದೆ ಎಂದು ಜರಿದಿದ್ದರು. ಇದನ್ನೂ ಓದಿ: ಆಪ್ತ ಸಮಾಲೋಚನೆ: ಹದಿಹರೆಯದ ಮಕ್ಕಳು ಮಾತು ಕೇಳುತ್ತಿಲ್ಲ, ಪರಿಹಾರವೇನು?

ಇನ್ನು ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಯಾರು ಎಂದು ಕೇಳಿದ್ದ ಆಲಿಯಾ ಭಟ್​ ವಿರುದ್ಧ ಹಾಗೂ ಕಾರ್ಯಕ್ರಮ ನಿರೂಪಕ ಕರಣ್​ ಜೋಹರ್​ ವಿರುದ್ಧ ಈಗಾಗಲೇ ಭಾರಿ ಆಕ್ರೋಶ ವ್ಯಕ್ತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net