More

    ಸುಶಾಂತ್​ನಂತೆ ನಾನೂ ಆತ್ಮಹತ್ಯೆ ಮಾಡಿಕೊಳ್ಳಬಲ್ಲೆ ಎಂದ ಬಾಲಕ ನೇಣಿಗೆ ಶರಣು!

    ಬರೇಲಿ: ಚಿತ್ರ ನಟ-ನಟಿಯರನ್ನೇ ಸರ್ವಸ್ವ ಎಂದು ನಂಬುವ ದೊಡ್ಡ ಬಳಗವೇ ಇದೆ. ಪರದೆಯ ಮೇಲೆ ಅವರು ತೋರುವ ಹೀರೋಯಿಸಂಗೆ ಮುಗ್ಧ ಮನಸುಗಳು ಬಹುಬೇಗ ಆಕರ್ಷಿತವಾಗಿ ಬಿಡುತ್ತವೆ. ಪರದೆಯ ಮೇಲೆ ಅವರು ಹೇಳುವ ಬುದ್ಧಿಮಾತುಗಳನ್ನು ಆಲಿಸುವವರು ಅದರಲ್ಲಿಯೂ ಹೆಚ್ಚಾಗಿ ಮಕ್ಕಳು, ನಟ-ನಟಿಯರು ನಿಜ ಜೀವನದಲ್ಲಿ ತಪ್ಪು ಹಾದಿ ತುಳಿದಾಗ, ಅಷ್ಟೇ ಬೇಗ ವಿಚಲಿತಗೊಳ್ಳುತ್ತಾರೆ.

    ಅದಕ್ಕೆ ಒಂದು ತಾಜಾ ಉದಾಹರಣೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. 16 ವರ್ಷದ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ! ಮೊದಲೇ ಮಾನಸಿಕವಾಗಿ ನೊಂದಿದ್ದ ಈತನಿಗೆ ನಟ ಸುಶಾಂತ್​ ಸಿಂಗ್​ ರಜಪೂತ್​ರ ಆತ್ಮಹತ್ಯೆಯ ವಿಷಯ ಕೇಳಿ ತಾನೂ ಹಾಗೆ ಮಾಡಿಕೊಳ್ಳಬಹುದಲ್ಲ ಎನಿಸಿದೆ!

    ಸುಶಾಂತ್​ರಂಥ ನಟನೇ ಆತ್ಮಹತ್ಯೆ ಮಾಡಿಕೊಳ್ಳಬೇಕಾದರೆ, ನಾನೂ ಮಾಡಿಕೊಳ್ಳಲು ಸಾಧ್ಯವಿದೆ ಎಂದು ತನ್ನ ಸಹೋದರನಿಗೆ ಹೇಳಿದ್ದ ಈ ಬಾಲಕ, ಮಾರನೆಯ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ!

    ಅಷ್ಟಕ್ಕೂ ನಡೆದಿರುವುದು ಏನೆಂದರೆ ಬಾಲಕನಾಗಿದ್ದೂ ಹುಡುಗಿಯಂತೆ ಈಗ ಕಾಣಿಸುತ್ತಿದ್ದ. ಇದರಿಂದಾಗಿ ಈತನ ಕ್ಲಾಸ್​ಮೇಟ್​ಗಳು ಇವನನ್ನು ನೋಡಿ ನಗುತ್ತಿದ್ದರು. ಈತನ ಮುಖ ಮಾತ್ರವಲ್ಲದೇ, ದೇಹದಲ್ಲಿಯೂ ಹುಡುಗಿಯರಂತೆ ಪರಿವರ್ತನೆ ಆಗುತ್ತಿದ್ದುದರಿಂದ ಈತನ ವರ್ತನೆ ನೋಡಿದರು ತೃತೀಯ ಲಿಂಗಿ ಎಂದು ಕರೆಯುತ್ತಿದ್ದರು.

    ಇದನ್ನೂ ಓದಿ: ಪಾಲ್ಗರ್​ನಲ್ಲಿ ​ಸಾಧುಗಳ ಹತ್ಯೆ: ಐವರು ಆರೋಪಿಗಳಿಗೆ ಕರೊನಾ

    ಇದು ಆತನಿಗೆ ಹೊಸ ವಿಷಯವೇನೂ ಆಗಿರಲಿಲ್ಲ. ಈ ಅಪಹಾಸ್ಯದ ನಡುವೆಯೇ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಬಾಲಕ, ಅದೇ ರೀತಿಯಲ್ಲಿಯೇ ಬೆಳೆಯುತ್ತ ಬಂದ. ಆದರೆ ನಟ ಸುಶಾಂತ್​ ಆತ್ಮಹತ್ಯೆಯ ವಿಷಯ ತಿಳಿಯುತ್ತಲೇ ತನ್ನ ಸಹೋದರನಿಗೆ ಆತ್ಮಹತ್ಯೆಯ ವಿಷಯ ಹೇಳಿದ್ದಾನೆ. ಆದರೆ ಆತ ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ.

    ಆದರೆ, ತಂದೆಗೆ ಪತ್ರ ಬರೆದಿರುವ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು ಹುಡುಗನಾದರೂ, ನನ್ನ ಮುಖ ಹುಡುಗಿಯರನ್ನು ಹೋಲುತ್ತದೆ. ನನ್ನ ವರ್ತನೆ ಕೂಡ ಹುಡುಗಿಯರಂತೆ ಇದೆ ಎಂದುಕೊಂಡು ಎಲ್ಲರೂ ನನ್ನನ್ನು ಅಪಹಾಸ್ಯ ಮಾಡುತ್ತಾರೆ. ನನ್ನನ್ನು ತೃತೀಯ ಲಿಂಗಿ ಎಂದು ಕರೆಯುತ್ತಾರೆ. ಹೋದಲ್ಲಿ, ಬಂದಲ್ಲಿ ಎಲ್ಲೆಡೆ ಎಲ್ಲರೂ ಮಾಡುವ ಹಾಸ್ಯವನ್ನು ಇನ್ನು ಸಹಿಸಿಕೊಂಡು ಇರಲು ಸಾಧ್ಯವಾಗುತ್ತಿಲ್ಲ. ನನ್ನ ಕ್ಷಮಿಸಿಬಿಡು ಪಪ್ಪಾ… ನಾನು ಸಾಯುತ್ತಿದ್ದೇನೆ… ಎಂದು ಬರೆದಿದ್ದಾನೆ.

    ಪಪ್ಪಾ… ನಿನಗೆ ನಾನು ಒಳ್ಳೆಯ ಮಗನಾಗಿ ಇರಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನನ್ನನ್ನು ಕ್ಷಮಿಸಿಬಿಡು. ನಾನು ನಿಮ್ಮಂತೆ ಸಂಪಾದಿಸಲು ಸಾಧ್ಯವಿಲ್ಲ. ನನ್ನ ದೇಹದಲ್ಲಿ ಹುಡುಗಿಯ ಲಕ್ಷಣಗಳು ಗೋಚಾರವಾಗುತ್ತಿದೆ. ನನ್ನ ಮುಖ ಕೂಡ ಅವರಂತೆಯೇ ಇದೆ. ನಾನು ಹೀಗೇ ಬೆಳೆಯುತ್ತಾ ಹೋದರೆ ಜನರು ನಿನ್ನನ್ನು ನೋಡಿಯೂ ನಗಲು ಶುರು ಮಾಡುತ್ತಾರೆ. ನನ್ನಿಂದ ನಿನ್ನ ಜೀವನವೂ ಹಾಳಾಗುತ್ತದೆ ಎಂದು ಬರೆದಿದ್ದಾನೆ. ಈತನ ತಾಯಿ ಕೆಲ ವರ್ಷಗಳಿಂದ ಹಿಂದೆ ಮೃತಪಟ್ಟಿದ್ದಾರೆ.

    ಒಂದು ಟೆಂಟ್​ಗಾಗಿ ಶುರುವಾಯ್ತಾ ಇಂಡೋ-ಚೈನಾ ಫೈಟ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts