More

    ಒಂದು ಟೆಂಟ್​ಗಾಗಿ ಶುರುವಾಯ್ತಾ ಇಂಡೋ-ಚೈನಾ ಫೈಟ್​?

    ನವದೆಹಲಿ: ಪೂರ್ವ ಲಡಾಕ್‌ನಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆ ತಾರಕಕ್ಕೇರಿದ್ದು, ಇದಾಗಲೇ 30 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. 45ಕ್ಕೂ ಅಧಿಕ ಚೀನಾ ಸೈನಿಕರು ಕೂಡ ಘಟನೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

    ಈ ಘರ್ಷಣೆಗೆ ಕಾರಣ ಏನು ಎಂಬ ಬಗ್ಗೆ ಗಮನಿಸಿದಾಗ, ಗಾಲ್ವಾನ್ ನದಿ ಭೂಪ್ರದೇಶ ಬಳಿಯ ಪೆಟ್ರೋಲಿಂಗ್ ಪಾಯಿಂಟ್ 14ರ ಬಳಿ ಸ್ಥಾಪಿಸಲಾದ ಟೆಂಟ್​ ಎಂಬುದಾಗಿ ವರದಿಯಾಗಿದೆ. ಈ ನದಿ ಕಣಿವೆಯಲ್ಲಿ ಕಳೆದ ಐದು ವಾರಗಳಿಂದ ನಡೆಯುತ್ತಿದ್ದ ಕಿತ್ತಾಟದ ಕುರಿತು ಮಾತುಕತೆಯ ಮೂಲಕ ಪರಿಹಾರ ಮಾಡಲು ಎರಡೂ ದೇಶಗಳು ನಿರ್ಧರಿಸಿದ್ದವು. ಹೀಗಾಗಿ ಸೋಮವಾರ ಚೀನಾ ಸೈನಿಕರು ಜಾಗದಿಂದ ಹಿಂದಕ್ಕೆ ಸರಿಯಲು ಮುಂದಾಗಿದ್ದರು.

    ಆದರೆ ಅದಾಗಲೇ ಪಾಯಿಂಟ್ 14ರ ಬಳಿ ನದಿ ಕಣಿವೆಯ 15 ಸಾವಿರ ಅಡಿ ಎತ್ತರದಲ್ಲಿ ಪೀಪಲ್ಸ್ ಲಿಬರೇಶನ್ ಸೇನೆ ಅಕ್ರಮವಾಗಿ ಟೆಂಟ್​ ನಿರ್ಮಾಣ ಮಾಡಿತ್ತು. ಕಳೆದ ವಾರ (ಜೂನ್​ 6ರಂದು) ಲೆಫ್ಟಿನೆಂಟ್ ಕಮಾಂಡರ್ ಮಟ್ಟದಲ್ಲಿ ನಡೆದ ಸಭೆಯಲ್ಲಿ ಈ ಸ್ಥಳದಲ್ಲಿ ಹಾಕಿದ್ದ ಎರಡು ಸೇನೆಯ ಟೆಂಟ್‌ಗಳನ್ನು ತೆರವು ಮಾಡಲು ಮಾತುಕತೆ ಕೂಡ ನಡೆದಿತ್ತು. ಆದರೆ ಇದನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಟೆಂಟ್​ ತೆರವಿಗೆ ಮುಂದಾಗಿದೆ.

    ಇದನ್ನೂ ಓದಿ: ಭಾರತ-ಚೀನಾ ಗಡಿ ಕುರಿತು ಜೂ.19ಕ್ಕೆ ಸರ್ವ ಪಕ್ಷಗಳ ಸಭೆ ಕರೆದ ಮೋದಿ

    ಅಕ್ರಮವಾಗಿ ನಿರ್ಮಿಸಲಾದ ಟೆಂಟ್​ ತೆರವು ಮಾಡಲು ಮುಂದಾದರೂ, ಇದನ್ನು ಸಹಿಸದ ಚೀನಾ ಸೇನೆ ಪಾಯಿಂಟ್ 14 ರ ಮೇಲಿನ ಎತ್ತರ ಪ್ರದೇಶದಿಂದ ಕಲ್ಲು ತೂರುವ ಮೂಲಕ ದಾಳಿ ಶುರು ಮಾಡಿದೆ. ಅಷ್ಟೇ ಅಲ್ಲದೇ ಕಬ್ಬಿಣದ ಸರಳುಗಳ ಮೂಲಕವೂ ಹಲ್ಲೆ ನಡೆಸಲು ಮುಂದಾಗಿದೆ.

    ಭಾರತೀಯ ಸೇನೆಯ ಕರ್ನಲ್ ಬಿ.ಎಲ್.ಸಂತೋಷ್ ಬಾಬು ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಶುರು ಮಾಡಿತೋ, ಆಗ ಭಾರತೀಯ ಯೋಧರು ತಿರುಗೇಟು ನೀಡಿದರು. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಘರ್ಷಣೆ ಏರ್ಪಟ್ಟಿದ್ದೆ. ಉಗುರ, ಲಾಠಿ ಮತ್ತು ರಾಡರ್​ಗಳಿಂದ ಘರ್ಷಣೆ ನಡೆಸಿವೆ.
    ಸೋಮವಾರ ಮಧ್ಯಾಹ್ನ ಪ್ರಾರಂಭವಾದ ಈ ಘರ್ಷಣೆ ಆರು ಗಂಟೆಗಳ ಕಾಲ ನಡೆದಿದೆ. ಈ ಸಮಯದಲ್ಲಿ ಹಲವಾರು ಯೋಧರು ಗಾಲ್ವಾನ್ ನದಿಗೆ ಬಿದ್ದರು. ತೀವ್ರ ಶೀತದಿಂದಾಗಿ ಮತ್ತು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

    ಈ ಸಮಯದಲ್ಲಿ, ಭಾರತೀಯ ಯೋಧರು ಶಸ್ತ್ರಸಜ್ಜಿತರಾಗಿದ್ದರೂ, ಚೀನಿಯರತ್ತ ಗುಂಡು ಹಾರಿಸದೇ ಉಭಯ ದೇಶಗಳ ನಡುವೆ ಇರುವ ನಿಯಮಗಳನ್ನು ಪಾಲನೆ ಮಾಡಿದ್ದಾರೆ.

    ಇದನ್ನೂ ಓದಿ: ಭಾರತ-ಚೀನಾ ಬಿಕ್ಕಟ್ಟು: ಕುತೂಹಲ ಮೂಡಿಸಿದ ಪ್ರಧಾನಿ ಮೋದಿಯವರ ನಡೆ…ಜೂ.19ರವರೆಗೆ ಕಾಯಬೇಕು

    ಈ ನಡುವೆ ಭಾರತ ಹೇಳಿಕೆ ನೀಡಿದ್ದು, ಚೀನಾದ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಲು ಭಾರತ ಬದ್ಧವಾಗಿದೆ ಮತ್ತು ಯಾವಾಗಲೂ ವಾಸ್ತವಿಕ ನಿಯಂತ್ರಣ ರೇಖೆಯ ಬದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. ಆದರೆ ಇಲ್ಲಿಯವರೆಗೆ ಉಭಯ ದೇಶಗಳ ನಡುವೆ ಆಗಿರುವ ಮಾತುಕತೆಯನ್ನು ಮೀರಿ ಚೀನಾ ನಡೆದುಕೊಳ್ಳುತ್ತಿದ್ದು, ಇಷ್ಟು ಘರ್ಷಣೆಗೆ ಕಾರಣವಾಗಿದೆ ಎಂದು ಹೇಳಿದೆ.

    ಮೈ ಜಿಂದಾ ಹೂಂ… ಪತ್ನಿಗೆ ಕರೆ ಮಾಡಿದ ‘ಹುತಾತ್ಮ’ ಯೋಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts