ಲೈಫ್‌ಸ್ಟೈಲ್

ತೂಕ ಇಳಿಸಿಕೊಳ್ಳಲು ಮಧ್ಯಂತರ ಉಪವಾಸ ಮಾಡುತ್ತಿದ್ದೀರಾ? ಹಾಗಿದ್ದರೆ, ಇದೆಷ್ಟು ಅಪಾಯಕಾರಿ! ಇಲ್ಲಿದೆ ಮಾಹಿತಿ| Health tips

Health tips: ಇಂದಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಒಂದು ಫ್ಯಾಷನ್​ ಆಗಿ ಬದಲಾವಣೆ ಹೊಂದುತ್ತಿದೆ. ಯುವಜನರು ತಮಗೆ ಇಷ್ಟ ಬಂದ ಹಾಗೆ ತೂಕ ಇಳಿಸಿಕೊಳ್ಳುವುದು ಹಾಗೇ ಏರಿಸಿಕೊಳ್ಳುವುದನ್ನು ಮಾಡುತ್ತಾರೆ. ಮಧ್ಯಂತರ ಉಪವಾಸವು ತೂಕ ಇಳಿಕೆಗೆ ಜನಪ್ರಿಯ ವಿಧಾನವಾದರೂ, ಇದು ಎಲ್ಲರಿಗೂ ಸುರಕ್ಷಿತವಲ್ಲ. ಕೆಲವರಿಗೆ ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಮಧ್ಯಂತರ ಉಪವಾಸದಿಂದಾಗುವ ಅಪಾಯಗಳು

1. ಆರೋಗ್ಯ ಸಮಸ್ಯೆಗಳಿರುವವರಿಗೆ ಅಪಾಯ

ಮಧುಮೇಹ, ಕಡಿಮೆ ರಕ್ತದೊತ್ತಡ, ಹೃದಯ ಸಂಬಂಧಿತ ಕಾಯಿಲೆಗಳು, ಥೈರಾಯ್ಡ್ ಸಮಸ್ಯೆಗಳು ಅಥವಾ ಕಿಡ್ನಿ ರೋಗಗಳಿಂದ ಬಳಲುತ್ತಿರುವವರಿಗೆ ಮಧ್ಯಂತರ ಉಪವಾಸ ಅಪಾಯಕಾರಿಯಾಗಬಹುದು. ಇದು ಉಪವಾಸದಿಂದ ದೇಹದ ರಕ್ತದ ಸಕ್ಕರೆ ಮಟ್ಟವು ತೀವ್ರವಾಗಿ ಕಡಿಮೆ ಮಾಡುತ್ತದೆ. ಇದರಿಂದ ತಲೆಸುತ್ತು, ಆಯಾಸ, ಅಥವಾ ಗಂಭೀರ ಸಂದರ್ಭಗಳಲ್ಲಿ ಒತ್ತಡಕ್ಕೆ ಕಾರಣವಾಗಬಹುದು. ಮಧುಮೇಹಿಗಳಿಗೆ ಸರಿಯದ ಸಮಯದಲ್ಲಿ ಔಷಧಗಳನ್ನು ಸೇವಿಸುವ ಅಗತ್ಯ ಹೆಚ್ಚಾಗಿರುವುದರಿಂದ ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

2. ಪೌಷ್ಟಿಕಾಂಶದ ಕೊರತೆ

ಮಧ್ಯಂತರ ಉಪವಾಸದಲ್ಲಿ ಆಹಾರ ಸೇವನೆಗೆ ಸೀಮಿತ ಸಮಯ ಇರುವುದರಿಂದ ಇದು ದೇಹಕ್ಕೆ ಬೇಕಾದ ವಿಟಮಿನ್‌ಗಳು, ಖನಿಜಗಳು, ಫೈಬರ್ ಮತ್ತು ಪ್ರೋಟೀನ್‌ಗಳಂತಹ ಅಗತ್ಯ ಪೌಷ್ಟಿಕಾಂಶಗಳ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹಕ್ಕೆ ಶಕ್ತಿಯ ಕೊರತೆ, ದೌರ್ಬಲ್ಯ, ಕೂದಲು ಉದುರಿಕೆ, ಚರ್ಮದ ಸಮಸ್ಯೆಗಳು, ಅಥವಾ ರೋಗನಿರೋಧಕ ಶಕ್ತಿಯ ಕುಸಿತ ಉಂಟಾಗಬಹುದು. ಇನ್ನು ಗರ್ಭಿಣಿಯರು, ಮಕ್ಕಳು, ವಯಸ್ಸಾದವರು ಈ ರೀತಿಯ ಮಧ್ಯುಂತರ ಉಪವಾಸವನ್ನು ಮಾಡಿದರೆ, ಅವರಲ್ಲಿ ಗಂಭೀರವಾದ ಪೌಷ್ಟಿಕಾಂಶದ ಕೊರತೆಗೆ ಉಂಟಾಗಬಹುದು.

3. ಚಯಾಪಚಯದ ತೊಂದರೆಗಳು

ತೂಕ ಇಳಿಸಿಕೊಳ್ಳುವ ನಿಟ್ಟಿನಲ್ಲಿ ದೀರ್ಘಕಾಲಿಕ ಉಪವಾಸವನ್ನು ಮಾಡಿದರೆ, ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ದೇಹಕ್ಕೆ ಬೇಕಾಗುವ ಕ್ಯಾಲೋರಿಗಳನ್ನು ಸುಡುವಂತಹ ಪರಿಸ್ಥಿತಿಯನ್ನು ಕಾಪಾಡುತ್ತದೆ. ಇದರಿಂದ ತೂಕ ಇಳಿಸಿಕೊಳ್ಳುವ ಬದಲು ತೂಕ ಹೆಚ್ಚಾಗುವ ಪ್ರಕ್ರಿಯೆ ಹೆಚ್ಚಾಗುತ್ತದೆ. ಇದರಿಂದ ಥೈರಾಯ್ಡ್​ ಸಮಸ್ಯೆಗಳಿಂದ ಬಳಲುತ್ತಿರುವಂತವರಿಗೆ ಗಂಭೀರವಾಗಿ ಸಮಸ್ಯೆ ಉಂಟಾಗಬಹುದು.

4. ಮಾನಸಿಕ ಒತ್ತಡ ಮತ್ತು ಆಹಾರದ ಅಸ್ವಸ್ಥತೆ

ಈ ರೀತಿಯಾಗಿ ಉಪವಾಸ ಮಾಡುವುದರಿಂದ ಕೆಲವರಲ್ಲಿ ಆಹಾರದ ಬಗ್ಗೆ ಅಹಿತಕರ ಮನೋಭಾವ ಉಂಟಾಗಬಹುದು. ಇದು ಆಹಾರ ಸೇವನೆಗೆ ತೊಂದರೆ ಉಂಟು ಮಾಡುವುದರಿಂದ ಮಾನಸಿಕ ಒತ್ತಡ, ಆತಂಕ ಉಂಟಾಗಿ, ಅತಿಯಾಗಿ ಆಹಾರ ತಿನ್ನುವುದು, ಅಥವಾ ಆಹಾರದ ಮೇಲೆ ಭಯ ಉಂಟಾಗಬಹುದು. ಇದು ಮಾನಸಿಕವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

5. ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು

ಸರಿಯಾದ ಮಾರ್ಗದರ್ಶನವಿಲ್ಲದೆ ದೀರ್ಘವಾದ ಮಧ್ಯಂತರ ಉಪವಾಸವನ್ನು ಮಾಡುವುದರಿಂದ ಇದು ದೇಹದ ಶಕ್ತಿಯ ಮಟ್ಟ, ಜೀರ್ಣಶಕ್ತಿ, ಮೇಲೆ ಪರಿಣಾಮ ಬೀರಬಹುದು. ಹಾಗೆಯೇ ವಯಸ್ಸಾದವರಿಗೆ, ಗರ್ಭೀಣಿಯರಿಗೆ, ದುರ್ಬಲರಿಗೆ, ಮಕ್ಕಳ ಮೇಲೆ ಪ್ರಭಾವ ಬೀರಬಹುದಾಗಿದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ