ಬೆಂಗಳೂರು: ಮಳೆಗಾಲ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ಧಾರಕಾರ ಮಳೆ ಸುರಿಯಲು ಪ್ರಾರಂಭಿಸಿದೆ. ಇದರ ಜತೆ ಹಲವಾರು ಆರೋಗ್ಯ ಸಮಸ್ಯೆಗಳು ಒಂದರ ಮೇಲೊಂದು ಕಾಡುತ್ತಿದೆ. ಶೀತ, ಕೆಮ್ಮು, ಜ್ವರ, ಮೈ-ಕೈ ನೋವು ಹೀಗೆ ನಾನಾ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಗಳಿಂದ ಮುಕ್ತಿ ಪಡೆಯುವುದು ಹೇಗೆ? ಏನು ಮಾಡೋದು ಎಂಬುದೇ ಸದ್ಯ ಅನೇಕರ ಪ್ರಶ್ನೆ.
ಇದನ್ನೂ ಓದಿ: ಬ್ಲೌಸ್ಪೀಸ್ ಖರೀದಿ ನೆಪದಲ್ಲಿ ಚಿನ್ನಾಭರಣ ಕಳವು: ಬುರ್ಖಾ ಧರಿಸಿ 10 ಲಕ್ಷ ರೂಪಾಯಿ ಮೌಲ್ಯದ ಆಭರಣ ದೋಚಿದ ಮಹಿಳೆ
ಮಳೆಗಾಲದಲ್ಲಿ ಕಾಡುವ ಹಲವಾರು ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲು ಒಂದಷ್ಟು ಸಲಹೆಗಳನ್ನು ನಾವಿಲ್ಲಿ ನಿಮಗೆ ತಿಳಿಸಿ ಕೊಟ್ಟಿದ್ದೇವೆ, ಅನುಸರಿಸಿ. ಮಳೆಗಾಲದಲ್ಲಿ ಕುದಿಸಿ ತಣ್ಣಗಾಗಿಸಿದ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಎದುರಾಗುವುದನ್ನು ತಡೆಗಟ್ಟಬಹುದು. ನೀರಿನ ಮೂಲಗಳು ಕಲುಷಿತಗೊಳ್ಳುತ್ತದೆ ಮತ್ತು ಈ ನೀರನ್ನು ಬಳಸುವುದರಿಂದ ರೋಗಗಳು ಹರಡುವ ಸಾಧ್ಯತೆ ಹೆಚ್ಚರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಉತ್ತಮ.
ರಸ್ತೆಬದಿಯ ಆಹಾರ ಪದಾರ್ಥಗಳನ್ನು ಅನೇಕರು ತುಂಬಾ ಇಷ್ಟ ಪಡುತ್ತಾರೆ. ಆದರೆ ಇದೇ ಆಹಾರ ಪದಾರ್ಥಗಳು ಜೀವಕ್ಕೆ ಕುತ್ತು ತರಬಹುದು. ಮಳೆಗಾಲ ಶುರುವಾದಾಗ ಅಲ್ಲಿ ಬಳಕೆಯಾಗುವ ನೀರು ಗುಣಮಟ್ಟದ್ದಾಗಿರಬೇಕೆಂದಿಲ್ಲ. ಹೆಚ್ಚಾಗಿ ಬೀದಿ ಬದಿಯ ಆಹಾರಗಳನ್ನು ತೆರೆದ ಸ್ಥಳದಲ್ಲಿ ಇಡುವುದರಿಂದ ಖಾಯಿಲೆಗಳು ಮತ್ತಷ್ಟು ಹತ್ತಿರವಾಗಬಹುದು. ಇಂತಹ ಸಮಸ್ಯೆಗಳು ಉಲ್ಬಣಗೊಳ್ಳುವ ಮುನ್ನವೇ ಇದಕ್ಕೆ ಕಡಿವಾಣ ಹಾಕುವುದು ಸೂಕ್ತ. ಯಾಕೆಂದರೆ ಮಳೆಗಾಲದಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಸ್ಟ್ರೀಟ್ ಫುಡ್ ಕೂಡ ಒಂದು ಕಾರಣ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ತಂಡಕ್ಕೆ ಕಾದಿದೆ ಬಿಗ್ ಶಾಕ್: ಗುಡ್ಬೈ ಹೇಳಲಿದ್ದಾರೆ ಇಬ್ಬರು ಸ್ಟಾರ್ ಆಟಗಾರರು!
ಮಳೆಗಾಲದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಅಧಿಕ. ಮನೆಯ ಸುತ್ತಲೂ ನಿಲ್ಲುವ ನೀರಿನಿಂದ ಇಂತಹ ಕೀಟಗಳ ಸಂತಾನೋತ್ಪತ್ತಿ ಹೆಚ್ಚುತ್ತದೆ. ಆದ್ದರಿಂದ ನೀವು ವಾಸಿಸುವ ಪ್ರದೇಶದಲ್ಲಿನ ಚರಂಡಿಗಳು ಮುಚ್ಚಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ನಿಂತ ನೀರಿನ ಮೂಲಗಳನ್ನು ತೆಗೆದುಹಾಕಿ. ಇದು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಡಿವಾಣ ಹಾಕುತ್ತದೆ.
ಮಾರುಕಟ್ಟೆಯಿಂದ ಖರೀದಿಸಿದ ಹಣ್ಣುಗಳು ಮತ್ತು ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆಯುವುದು ಉತ್ತಮ. ಇದು ಹಣ್ಣು ಮತ್ತು ತರಕಾರಿಯಲ್ಲಿರುವ ಸೂಕ್ಷ್ಮಜೀವಿಗಳನ್ನು ನಾಶ ಮಾಡುತ್ತವೆ. ಉತ್ತಮ ವ್ಯಾಯಾಮ ಹಾಗೂ ಸರಿಯಾದ ಆಹಾರ ಕ್ರಮ ಅನುಸರಿಸುವುದು, ನೈರ್ಮಲ್ಯತೆಯ ಕಡೆಗೆ ಗಮನಹರಿಸುವುದು ಮಳೆಗಾಲದಲ್ಲಿ ಹರಡುವ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಲು ಸಹಕಾರಿಯಾಗಿದೆ.