ತುಮಕೂರು: ಕರೊನಾ ವೈರಸ್ ಭೀತಿ ಜಾಗತಿಕವಾಗಿ ಮುಂದುವರಿದಿದ್ದು, ಎಲ್ಲರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಎಷ್ಟರ ಮಟ್ಟಿಗೆ ಎನ್ನುವುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ.
ಕೆಲಸಕ್ಕೆ ಹೋಗಿ ಬಂದರೆ ಗ್ರಾಮಕ್ಕೆ ಕರೊನಾ ಬರುತ್ತದೆ ಎಂದು ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಕುಣಿಗಲ್ ಸಮೀಪದ ರಂಗೇಗೌಡನ ಪಾಳ್ಯದಲ್ಲಿ ನಡೆದಿದೆ.
ಬಸ್ ತಡೆದು ರಂಗೇಗೌಡನ ಪಾಳ್ಯದ ನಿವಾಸಿ ರಘು ಹಾಗೂ ತಿಮ್ಮಯ್ಯ ಎಂಬುವರು ನಾಗರತ್ನ ಹಾಗೂ ಮುನಿಯಮ್ಮ ಎಂಬುವರ ಮೇಲೆ ಹಲ್ಲೆ ನಡೆಸಿ, ಗಾರ್ಮೆಂಟ್ ಕೆಲಸಕ್ಕೆ ಹೋಗಬೇಡಿ ಎಂದು ಗಲಾಟೆ ಮಾಡಿದ್ದಾರೆ.
ಬಸ್ನಲ್ಲಿ 15 ಜನ ಪ್ರಯಣ ಮಾಡುತ್ತಿದ್ದರು. ಮಹಿಳೆಯರು ಬೆಂಗಳೂರು ಸಮೀಪದ ಮಾಕಳಿ ಬಲಿಯಿರುವ ಗಾರ್ಮೆಂಟ್ಸ್ಗೆ ಹೋಗುತ್ತಿದ್ದರು. ಲಾಕ್ಡೌನ್ ಸಡಿಲಿಕೆ ಬಳಿಕ ತುಮಕೂರು ಜಿಲ್ಲಾಧಿಕಾರಿಯ ಅನುಮತಿ ಪಡೆದು ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಕರೊನಾ ಭೀತಿಯಿಂದ ಮಹಿಳೆಯರಿಗೆ ಥಳಿಸಲಾಗಿದೆ. (ದಿಗ್ವಿಜಯ ನ್ಯೂಸ್)