More

    ಮುಂಬೈನಿಂದ ವಿಜಯಪುರಕ್ಕೆ ಸದ್ದಿಲ್ಲದೇ ಕಾಲಿಟ್ಟರು ತಬ್ಲಿಘಿಗಳು- ಜಿಲ್ಲಾಡಳಿತ ಮಾಡಿದ್ದೇನು?

    ಬೆಂಗಳೂರು: ಹಸಿರು ವಲಯವೆಂದೇ ತಿಂಗಳುಗಟ್ಟಲೆ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದ ಶಿವಮೊಗ್ಗದಲ್ಲಿ ನಿನ್ನೆ ಒಂದೇ ದಿನಕ್ಕೆ ಎಂಟು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಗುಜರಾತ್​ನಿಂದ ಆಗಮಿಸಿದ್ದ ಈ ಎಂಟೂ ಮಂದಿ ತಬ್ಲಿಘಿಗಳ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

    ಇದೀಗ ಮುಂಬೈನಿಂದ 13 ಮಂದಿ ತಬ್ಲಿಘಿಗಳು ಇಂದು ಬೆಳಗ್ಗೆ ವಿಜಯಪುರಕ್ಕೆ ಯಾರಿಗೂ ತಿಳಿಯದಂತೆ ಕಾಲಿಟ್ಟಿದ್ದರು. ಆದರೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಖಚಿತ ಮಾಹಿತಿ ಮೊದಲೇ ಸಿಕ್ಕಿದ್ದರಿಂದ  ಧೂಳಖೇಡ ಚೆಕ್​ಪೋಸ್ಟ್​ ಬಳಿ ಅವರನ್ನು ತಡೆದು ಕ್ವಾರಂಟೈನ್​ಗೆ ಕಳುಹಿಸಲಾಗಿದೆ. ತಾವು ಎಲ್ಲಿಂದ ಬಂದಿದ್ದೇವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಲೂ ಆರಂಭದಲ್ಲಿ ಇವರು ನಿರಾಕರಿಸಿದ್ದರು ಎನ್ನಲಾಗಿದೆ!

    ಇದನ್ನೂ ಓದಿ: ಪಿಯುಸಿವರೆಗಿನ ಪಾಠ ಇನ್ಮುಂದೆ ಮನೆಯಲ್ಲಿಯೇ ಉಚಿತವಾಗಿ ಕಲಿಯಬಹುದು!

    ಇದಾಗಲೇ ವಿಜಯಪುರವು ಐವತ್ತು ಸೋಂಕಿತರನ್ನು ಕಂಡಿದೆ. ಮೂರು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಹಲವರಿಗೆ ತಬ್ಲಿಘಿ ನಂಟಿದೆ ಎಂದೂ ವರದಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಎಲ್ಲರನ್ನೂ ಕಡ್ಡಾಯವಾಗಿ ಕ್ವಾರಂಟೈನ್​ಗೆ ಕಳುಹಿಸಲಾಗಿದೆ.

    ಗಂಟಲು ದ್ರವ ಮಾದರಿಯನ್ನು ಈ ಎಲ್ಲರಿಂದಲೂ ಸಂಗ್ರಹಿಸಲಾಗಿದೆ. ಇವುಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ.

    ಇದನ್ನೂ ಓದಿ: ಅಕ್ಷಯ ಕುಮಾರನಿಗಾಗಿ ಟೆರೇಸ್​ ಮೇಲೆ ಕಾದು ಕುಳಿತು ಸುಸ್ತಾದ ಮದುಮಗಳು!

    ಮಹಾರಾಷ್ಟ್ರದ ಸಿಂಧುದುರ್ಗದಿಂದ ಇಂದು ರೈಲಿನ ಮೂಲಕ ವಿಜಯಪುರಕ್ಕೆ 1300 ಪ್ರಯಾಣಿಕರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ದೆಹಲಿ, ಗುಜರಾತ್, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರದಿಂದ ಬರುವ ಯಾರೇ ಆದರೂ ಅವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡುವುದಷ್ಟೇ ಅಲ್ಲದೇ, ಅವರನ್ನು ತೀವ್ರ ನಿಗಾದಲ್ಲಿ ಇಡಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: 22 ವರ್ಷಗಳ ಹಿಂದೆ ಜಾರಿದ ಪ್ರಧಾನಿ: ವಿಶ್ವ ಕೊಂಡಾಡಿದ ಅಣ್ವಸ್ತ್ರ ಪರೀಕ್ಷೆ ನೆನೆದ ಮೋದಿ

    ಒಂದು ವೇಳೆ ಬಂದಿರುವ ಪ್ರದೇಶಗಳ ಬಗ್ಗೆ ಸುಳ್ಳು ಮಾಹಿತಿ ನೀಡುವುದಾಗಲೀ ಅಥವಾ ಬಂದಿರುವ ಬಗ್ಗೆಯೇ ತಿಳಿಸದೇ ಇದ್ದ ಪಕ್ಷದಲ್ಲಿ ಅಂಥವರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts