More

    ಅಬಕಾರಿ ಸಚಿವ ಎಚ್​. ನಾಗೇಶ್​ಗೆ ಸಿಎಂ ಬಿಎಸ್​ವೈ ಶಾಕ್​!

    ಬೆಂಗಳೂರು: ಅಬಕಾರಿ ಸಚಿವ ಎಚ್​. ನಾಗೇಶ್ ಅವರ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಬ್ರೇಕ್​ ಹಾಕಿದ್ದಾರೆ.

    ಅಬಕಾರಿ ಇಲಾಖೆಯ ಪುನಾರಚನೆ ಹಾಗು ಸಿಬ್ಬಂದಿ ವರ್ಗಾವಣೆಯ ನಿರ್ಧಾರಕ್ಕೆ ಸಿಎಂ ಬಿಎಸ್​ವೈ ತಡೆ ನೀಡಿದ್ದಾರೆ. ಸಚಿವ ನಾಗೇಶ್ ನಿರ್ಧಾರದ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಹಣದ ವ್ಯವಹಾರ ಹಾಗೂ ಭಾರಿ ಲಾಬಿಯ ಶಂಕೆ ಇರುವ ಹಿನ್ನಲೆಯಲ್ಲಿ ಸಿಎಂ ಬ್ರೇಕ್ ಹಾಕಿದ್ದಾರೆಂದು ತಿಳಿದುಬಂದಿದೆ.

    ಇದನ್ನೂ ಓದಿ: ತಾಯಂದಿರ ದಿನವೇ ನಡೆಯಿತು ತಂದೆ-ತಾಯಿಯ ಭೀಕರ ಹತ್ಯೆ: ಮಗನೇಕೆ ಇಂಥ ನೀಚ ಕೆಲಸಕ್ಕೆ ಮುಂದಾದ?

    ಎ, ಬಿ, ಸಿ ವರ್ಗ ಸೇರಿದಂತೆ 200ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಯನ್ನು ವರ್ಗಾವಣೆಗೊಳಿಸಲು ನಾಗೇಶ್ ಆದೇಶ ಮಾಡಿದ್ದರು. ಇದೀಗ ಈ ಆದೇಶವನ್ನು ತಡೆ ಹಿಡಿಯುವಂತೆ ಸಿಎಂ ಸೂಚನೆ ನೀಡಿದ್ದಾರೆ.

    ಇಲಾಖೆಯನ್ನು ಪುನಾರಚನೆಗೊಳಿಸಿದರೆ ಹೊಸ ಹುದ್ದೆ ಸೃಷ್ಟಿಸ ಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿಯೂ ಹೊರೆ ಬೀಳಲಿದೆ ಎಂದು ಸಚಿವ ನಾಗೇಶ್​ ಅವರ ಆದೇಶಕ್ಕೆ ಸಿಎಂ ಅಲ್ಪವಿರಾಮ ಇಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​​)

    ಇದನ್ನೂ ಓದಿ: ನೆರವಿಗೆ ಮಿಡಿಯುತ್ತಿದೆ ತಾಯಿ ಹೃದಯ; ಪ್ರೀತಿಸಿ ಮದುವೆಯಾದವಳನ್ನು ಕ್ಯಾನ್ಸರ್ ಎಂದು ತಿಳಿದು ಬಿಟ್ಟುಹೋದ ಪತಿ

    ರಾಯಚೂರಿನ ಮಾಜಿ ಸಂಸದ ರಾಜಾರಂಗಪ್ಪ ನಾಯಕ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts