More

    ಕೊನೆಗೂ ನನಸಾಗದ ಡಿಕೆಶಿ ಕನಸು!

    ಬೆಂಗಳೂರು: ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್​ ಅವರ ಅದ್ಧೂರಿ ಪದಗ್ರಹಣದ ಕನಸು ಕನಸಾಗಿಯೇ ಉಳಿದಿದೆ.

    ಎರಡು ತಿಂಗಳ ಹಿಂದೆಯೇ ಪದಗ್ರಹಣ ಮಾಡುವಂತೆ ಈ ಹಿಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೆ, ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸಿ ಪದಗ್ರಹಣ ಮಾಡುವುದಾಗಿ ಡಿಕೆಶಿ ತಿಳಿಸಿದ್ದರು.

    ಇದನ್ನೂ ಓದಿ: ಉಡುಪಿಯ ರೈತರೊಬ್ಬರ ದನದ ಕೊಟ್ಟಿಗೆಯಲ್ಲಿ 2 ಹೆಬ್ಬಾವು ಸೇರಿದಂತೆ 31 ಮೊಟ್ಟೆಗಳು ಪತ್ತೆ!

    ಇದಲ್ಲದೆ, ಸದನ ನಡೆಯುವಾಗ ಎಲ್ಲ ಶಾಸಕರು ಇರುತ್ತಾರೆ ಅವರ ಸಮ್ಮುಖದಲ್ಲಿ ಪದಗ್ರಹಣ ಮಾಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್​ ಹೇಳಿದ್ದರು. ಆದರೆ, ಅರಮನೆ ಮೈದಾನದಲ್ಲಿ ಬೃಹತ್ ಜನ ಸೇರಿಸಿ ಪದಗ್ರಹಣ ಮಾಡಲು ಡಿಕೆಶಿ ಪ್ಲಾನ್ ಮಾಡಿದ್ದರು.

    ಇದರ ನಡುವೆ ಕಾರ್ಮಿಕರನ್ನು ಊರಿಗೆ ಸ್ಥಳಾಂತರಿಸುವ ವಿಚಾರದಲ್ಲಿ ಸರ್ಕಾರ ಟಿಕೆಟ್​ ದರ ನಿಗದಿಪಡಿಸಿದ್ದನ್ನು ಡಿಕೆಶಿ ವಿರೋಧಿಸಿದ್ದರು. ಕಾರ್ಮಿಕರನ್ನು ಉಚಿತವಾಗಿ ಸ್ಥಳಾಂತರ ಮಾಡಿ ಎಂದು ಕೆಪಿಸಿಸಿ ವತಿಯಿಂದ ಕೆಎಸ್​ಆರ್​ಟಿಸಿ ಎಂಡಿಗೆ 1 ಕೋಟಿ ರೂ. ಮೌಲ್ಯದ ಚೆಕ್ ನೀಡಲಾಗಿತ್ತು. ಆದರೆ, ಚೆಕ್​ನಲ್ಲಿ ಡಿಕೆಶಿ ಬದಲಾಗಿ ದಿನೇಶ್ ಗುಂಡೂರಾವ್ ಸಹಿ ಇದ್ದಿದ್ದು ಬಿಜೆಪಿ ನಾಯಕರ ಟೀಕೆಗೆ ಕಾರಣವಾಗಿತ್ತು.

    ಇದನ್ನೂ ಓದಿ: VIDEO| ಒಂದೇ ಗಂಟೇಲಿ 6 ಮಹಿಳೆಯರಿಗೆ ಲೈಂಗಿಕ ಕಿರುಕುಳ: ಸಿಸಿಟಿವಿಯಲ್ಲಿ ಕಾಮುಕನ ಭಯಾನಕ ದೃಶ್ಯ!

    ಇದೇ ವಿಚಾರಕ್ಕೆ ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇನ್ನೊಂದೆಡೆ ಕಂದಾಯ ಸಚಿವ ಆರ್ ಆಶೋಕ್ ಇದೊಂದು ಮೌಲ್ಯವಲ್ಲದ ಚೆಕ್​ ಎಂದು ಜರಿದಿದ್ದರು. ಇವರಿಗೆ ಚೆಕ್ ಪವರ್ ಇಲ್ಲ ಎಂದು ಡಿಕೆಶಿ ಕಾಲೆಳೆದಿದ್ದರು. ಇದೀಗ ಬಿಜೆಪಿ ನಾಯಕರ ಹೇಳಿಕೆ ಬೆನ್ನಲ್ಲೇ ಸರಳವಾಗಿ ಪದಗ್ರಹಣ ಮಾಡಲು ಡಿಕೆಶಿ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

    ಅಬಕಾರಿ ಸಚಿವ ಎಚ್​. ನಾಗೇಶ್​ಗೆ ಸಿಎಂ ಬಿಎಸ್​ವೈ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts