VIDEO| ಒಂದೇ ಗಂಟೇಲಿ 6 ಮಹಿಳೆಯರಿಗೆ ಲೈಂಗಿಕ ಕಿರುಕುಳ: ಸಿಸಿಟಿವಿಯಲ್ಲಿ ಕಾಮುಕನ ಭಯಾನಕ ದೃಶ್ಯ!

Accused
Published on

ನ್ಯೂಯಾರ್ಕ್​: ಕೇವಲ ಒಂದು ಗಂಟೆ ಅವಧಿಯಲ್ಲಿ 6 ಮಹಿಳೆಯರ ಮೇಲೆ ಹಲ್ಲೆ ಸೇರಿದಂತೆ 8 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಬ್ರೂಕ್ಲೈನ್​ನ ಸರಣಿ ಕಾಮುಕನನ್ನು ಎನ್​ವೈಪಿಡಿ (ನ್ಯೂಯಾರ್ಕ್​ ಸಿಟಿ ಪೊಲೀಸ್​ ಡಿಪಾರ್ಟ್​ಮೆಂಟ್​) ಬಂಧಿಸಿದೆ.

ಆರೋಪಿಯ ಹೆಸರು ಕೆವಿನ್​ ಜೆಂಕಿನ್ಸ್​ (26). ಈತನನ್ನು ಬ್ರೂಕ್ಲೈನ್​ನ ಬೆಡ್​ಫೋರ್ಸ್​ ಸ್ಟುಯೆಸೆಂಟ್ ವಿಭಾಗ ಶನಿವಾರ ಬಂಧಿಸಿದೆ. ಕಾಮುಕನ ನೀಚ ಕೃತ್ಯ ದಾಖಲಾಗಿರುವ ಸಿಸಿಟಿವಿ ದೃಶ್ಯವನ್ನು ಬಿಡುಗಡೆಯನ್ನು ಮಾಡಲಾಗಿದೆ. ಏಪ್ರಿಲ್​ 28 ರಿಂದ ಮೇ 1ರವರೆಗೆ ನಿರಂತರವಾಗಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಶುಕ್ರವಾರ ಬೆಳಗ್ಗೆ 9:55 ರಿಂದ 11:15ರ ನಡುವಿನ ಸಮಯದಲ್ಲಿ ಆರೋಪಿ 6 ಮಹಿಳೆಯರಿಗೆ ಹಲ್ಲೆ ಮಾಡಿದ್ದಾನೆ. ಸಂತ್ರಸ್ತರನ್ನು 16 ರಿಂದ 40 ವರ್ಷ ವಯಸ್ಸಿನೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮುಕನ ಹಲ್ಲೆಯಿಂದ ಯಾರಿಗೂ ಹಾನಿಯಾಗಿಲ್ಲ. ಆದರೆ, ಆತ ಬಲವಂತವಾಗಿ ಮಹಿಳೆಯರನ್ನು ನೆಲಕ್ಕೆ ಬೀಳಿಸಿ, ಅನುಚಿತ ವರ್ತನೆ ತೋರಿದ್ದಾನೆ. ಹೀಗಾಗಿ ಆತನ ಮೇಲೆ ಲೈಂಗಿಕ ಕಿರುಕುಳ ಮತ್ತು ಬಲವಂತವಾಗಿ ಮಹಿಳೆಯರನ್ನು ಸ್ಪರ್ಶಿಸಿದ್ದು ಸೇರಿದಂತೆ ಬಹು ಪ್ರಕರಣಗಳು ದಾಖಲಾಗಿವೆ.

ಕಳೆದ ಶುಕ್ರವಾರ ಸೌಥ್​ ವಿಲಿಯಮ್ಸ್​ಬರ್ಗ್​​ ನಾಸ್ಟ್ರ್ಯಾಂಡ್​ ಅವೆನ್ಯೂ ಬಳಿಯ ಫ್ಲಶಿಂಗ್​ ಅವೆನ್ಯೂನಲ್ಲಿ 23 ವರ್ಷದ ಮಹಿಳೆಯ ಸ್ಕರ್ಟ್​ ಅನ್ನು ಮೇಲೆತ್ತಲು ಆರೋಪಿ ಕೆವಿನ್​ ಜೆಂಕಿನ್ಸ್​ ಯತ್ನಿಸಿ, ಬಳಿಕ ಹಲ್ಲೆ ಮಾಡಿದ್ದಾನೆ. ಇಲ್ಲಿ ಆರಂಭವಾದ ಹಲ್ಲೆ ನಂತರ ಮೈರ್ಟಲ್​ ಆ್ಯಂಡ್​ ಬೆಡ್​ಫೋರ್ಡ್​ ಅವೆನ್ಯೂ ಬಳಿ 21 ವರ್ಷದ ಮಹಿಳೆಯನ್ನು ಹಿಡಿದೆಳೆದು ಖಾಸಗಿ ಅಂಗವನ್ನು ಸ್ಪರ್ಶಿಸಿ, ಅಲ್ಲಿಂದ ಪರಾರಿಯಾಗಿದ್ದಲ್ಲದೆ ಹಲ್ಲೆಯನ್ನೂ ನಡೆಸಿದ್ದಾನೆ.

ಬಳಿಕ ಸ್ಪೆನ್ಸರ್​ ಸ್ಟ್ರೀಟ್​ ಆ್ಯಂಡ್​ ವಿಲ್ಲೊಗ್ಬಿ ಅವೆನ್ಯೂ ಬಳಿ 16 ವರ್ಷದ ಹುಡುಗಿಯ ಮೇಲೆ ಹಲ್ಲೆ ಮಾಡಿ, ಕಿರುಕುಳ ನೀಡಿದ್ದಾನೆ. ಹುಡುಗಿಯ ಹಿಂದಿನಿಂದ ಬಂದ ಕಾಮುಕ ಆಕೆಯನ್ನು ನೆಲಕ್ಕೆ ದಬ್ಬಿ ಆಕೆಯ ಮುಖದ ಮೇಲೆ ತನ್ನ ಖಾಸಗಿ ಅಂಗವನ್ನು ಹೊತ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ 34 ಹಾಗೂ 30 ವರ್ಷದ ಮಹಿಳೆಯರಿಬ್ಬರನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ.

ಕೊನೆಯದಾಗಿ ನಾಸ್ಟ್ರ್ಯಾಂಡ್​ ಅವೆನ್ಯೂ ಬಳಿಯ ಪಲ್ಸಕಿ ಸ್ಟ್ರೀಟ್​ನಲ್ಲಿ 32 ವರ್ಷದ ಮಹಿಳೆಯನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದು, ಆಕೆಯ ಅಂಗಾಗಳನ್ನು ಮನಬಂದಂತೆ ಸ್ಪರ್ಶಿಸಿದ್ದಾನೆ. ಈ ವೇಳೆ ಆಕೆ ಸಹಾಯಕ್ಕಾಗಿ ಕೂಗುತ್ತಿದ್ದಂತೆ ಆಕೆಯನ್ನು ಜೋರಾಗಿ ದಬ್ಬಿ ಅಲ್ಲಿಂದ ಪರಾರಿಯಾಗಿದ್ದಾನೆ. ಇಷ್ಟೇಲ್ಲ ಘಟನೆ ಕೇವಲ ಒಂದೇ ಗಂಟೆಯಲ್ಲಿ ನಡೆದಿದ್ದು, ನ್ಯೂಯಾರ್ಕ್​ ಸಿಟಿಯನ್ನು ಬೆಚ್ಚಿಬೀಳಿಸಿದೆ. ಸದ್ಯ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದು, ಕಂಬಿ ಎಣಿಸುತ್ತಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net