ಜಿಲ್ಲೆ

ಕಾರಿನಲ್ಲಿಟ್ಟಿದ್ದ ಚಿನ್ನಾಭರಣ ಕದ್ದ, 24 ಗಂಟೆಯೊಳಗೇ ಸಿಕ್ಕಿಬಿದ್ದ: 4.65 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ..

ಬೆಂಗಳೂರು: ಚಿನ್ನಾಭರಣ ಕದ್ದ ಆರೋಪಿಯೊಬ್ಬ ದೂರು ದಾಖಲಾದ 24 ಗಂಟೆಯೊಳಗೆ ಸಿಕ್ಕಿ ಬಿದ್ದಿದ್ದಾನೆ. ಚಂದ್ರಾ ಬಡಾವಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ನಯಾಜ್​ ಪಾಷಾ ಎಂಬಾತ ಬಂಧಿತ ಆರೋಪಿ.

ಈತ ಕಾರೊಂದರಲ್ಲಿ ಇರಿಸಿದ್ದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ. ಮಾತ್ರವಲ್ಲ, ಕಾರಿನಲ್ಲಿ ಇರಿಸಿದ್ದ ಪರ್ಸ್​ ಕೂಡ ಕದ್ದೊಯ್ದಿದ್ದಾನೆ. ಕಳೆದುಕೊಂಡವರು ಈ ಬಗ್ಗೆ ಚಂದ್ರಾ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಾದ ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು 24 ಗಂಟೆಯೊಳಗೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 4.65 ಲಕ್ಷ ರೂ. ಮೌಲ್ಯದ 103 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.