ಕಲಬುರಗಿ: ಭಾರಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆಗಿಳಿದ ವಿದ್ಯಾರ್ಥಿನಿಯರು ಸುರಿಯುವ ಮಳೆಯಲ್ಲೇ ಬಸ್ವೊಂದನ್ನು ಅಡ್ಡಗಟ್ಟಿ ಘೋಷವಾಕ್ಯಗಳನ್ನು ಕೂಗಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಈ ಸನ್ನಿವೇಶ ಕಂಡುಬಂದಿತ್ತು.
ಇವರೆಲ್ಲರೂ ಸೇಡಂ ತಾಲೂಕಿನ ಬೊಂದೆಂಪಲ್ಲಿ, ಖಂಡೆರಾಯನಪಲ್ಲಿ ತಾಂಡಾದ ವಿದ್ಯಾರ್ಥಿನಿಯರು. ತಮ್ಮ ಊರಿಗೆ ಬಸ್ ಸೌಕರ್ಯ ಇಲ್ಲದ್ದರಿಂದ ಐದಾರು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾದ್ದರಿಂದ ಈ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಐದು ದಿನ ಶವಗಳ ಜತೆಗಿದ್ದ ಎರಡೂವರೆ ವರ್ಷದ ಮಗುವಿಗೆ ಇಂದು ರಕ್ತಪರೀಕ್ಷೆ!; ಒಂದೇ ಕುಟುಂಬದ ಐವರ ಸಾವಿನ ಪ್ರಕರಣ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಅಧ್ಯಕ್ಷರು ಸೇಡಂ ತಾಲೂಕಿನವರೇ ಆಗಿದ್ದರೂ ನಮ್ಮ ಊರಿಗೆ ಬಸ್ ಸೌಲಭ್ಯ ಕಲ್ಪಿಸಿಲ್ಲ ಎಂದು ರೋಸಿಹೋಗಿರುವ ವಿದ್ಯಾರ್ಥಿನಿಯರು ಹೀಗೆ ಪ್ರತಿಭಟನೆ ನಡೆಸಿ ಬಸ್ ಸೌಕರ್ಯ ನೀಡುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.