ನಿನ್ನೆಯಷ್ಟೇ ವಿದೇಶದಿಂದ ಬಂದಿದ್ರು, ಇಂದು ಸುಟ್ಟು ಕರಕಲಾದ್ರು; ಸಿಲಿಂಡರ್ ಸ್ಫೋಟಕ್ಕೆ ಅಮ್ಮ-ಮಗಳು ಬಲಿ

1168580
Published on

ಬೆಂಗಳೂರು: ದೇವರಚಿಕ್ಕನಹಳ್ಳಿಯ ಆಶ್ರಿತ್ ಆ್ಯಸ್ಪೈರ್ ಎಂಬ ಅಪಾರ್ಟ್​ಮೆಂಟ್​​ನಲ್ಲಿ ಸಂಭವಿಸಿರುವ ಅಗ್ನಿ ಅವಘಡದ ಕುರಿತು ಮತ್ತಷ್ಟು ಮಾಹಿತಿ ಗೊತ್ತಾಗಿದ್ದು, ಘಟನೆ ಕುರಿತ ಸ್ಪಷ್ಟ ಚಿತ್ರಣ ಸಿಗಲಾರಂಭಿಸುತ್ತಿದ್ದಂತೆ, ಸಾವಿಗೀಡಾದವರು ತಾಯಿ ಹಾಗೂ ಪುತ್ರಿ ಎಂಬುದು ತಿಳಿದು ಬಂದಿದೆ.

ಮೃತಪಟ್ಟವರು ಆಂಧ್ರಪ್ರದೇಶ ಮೂಲದ ಲಕ್ಷ್ಮೀದೇವಿ (82) ಹಾಗೂ ಅವರ ಪುತ್ರಿ ಭಾಗ್ಯರೇಖಾ (59). ಇಬ್ಬರೂ ವಿದೇಶ ಪ್ರವಾಸಕ್ಕೆ ಹೋಗಿದ್ದು, ನಿನ್ನೆಯಷ್ಟೇ ಮನೆಗೆ ಮರಳಿದ್ದರು. ಸುಟ್ಟ ಗಾಯಗಳಿಗೆ ಒಳಗಾಗಿರು ಐವರನ್ನು ಈಗಾಗಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.

ಅಪಾರ್ಟ್​ಮೆಂಟ್​ನ ಎಲ್ಲರನ್ನೂ ಪೊಲೀಸರು ತೆರವುಗೊಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಇನ್ನೂ ಬೆಂಕಿ ಆರಿಸುವ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಅಗ್ನಿಶಾಮಕ ವಾಹನ ಸಲೀಸಾಗಿ ಓಡಾಡುವಷ್ಟು ಸ್ಥಳ ಇರದಿದ್ದರೂ ಸಿಬ್ಬಂದಿ ವಾಹನ ತಲುಪಿಸಿಕೊಂಡು ಹರಸಾಹಸ ಮಾಡಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net