More

    ಐದು ದಿನ ಶವಗಳ ಜತೆಗಿದ್ದ ಎರಡೂವರೆ ವರ್ಷದ ಮಗುವಿಗೆ ಇಂದು ರಕ್ತಪರೀಕ್ಷೆ!; ಒಂದೇ ಕುಟುಂಬದ ಐವರ ಸಾವಿನ ಪ್ರಕರಣ

    ಬೆಂಗಳೂರು: ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇದಿನೆ ನಾನಾ ಬೆಳವಣಿಗೆಗಳು ಕಾಣಿಸುತ್ತಿದ್ದು, ಪ್ರಕರಣ ಕುರಿತ ಕುತೂಹಲ ಕೂಡ ಹೆಚ್ಚುತ್ತಲೇ ಹೋಗುತ್ತಿದೆ.

    ಬ್ಯಾಡರಹಳ್ಳಿಯ ನಿವಾಸಿ ಶಂಕರ್ ಅವರ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರೊಂದಿಗೆ ಮೊಮ್ಮಗು ಕೂಡ ಮೃತಪಟ್ಟಿತ್ತು. ಆದರೆ ಈ ಐವರ ಸಾವಿನ ಪ್ರಕರಣ ಐದು ದಿನಗಳ ಬಳಿಕ ಬೆಳಕಿಗೆ ಬಂದಿದ್ದು, ಅಷ್ಟೂ ದಿನ ಆ ಶವಗಳ ಜೊತೆ ಶಂಕರ್ ಅವರ ಪುತ್ರಿ ಸಿಂಚನಾಳ ಎರಡೂವರೆ ವರ್ಷದ ಮಗು ಜೀವಂತ ಇದ್ದಳು.

    ಇದನ್ನೂ ಓದಿ: ಒಂದೇ ಮನೆಯಲ್ಲಿ ಐವರ ಆತ್ಮಹತ್ಯೆ; ಮನೆವರೆಗೂ ಬಂದ ಅವರು ವಾಪಸ್ ಹೋಗಿದ್ದೇ ತಪ್ಪಾಯಿತಾ?

    ಹೀಗೆ ಐದು ದಿನಗಳ ಕಾಲ ಶವಗಳ ಜತೆಗಿದ್ದರೂ ಪವಾಡಸದೃಶ ಎಂಬಂತೆ ಬದುಕುಳಿದಿರುವ ಎರಡೂವರೆ ವರ್ಷದ ಮಗುವನ್ನು ಇಂದು ರಕ್ತಪರೀಕ್ಷೆಗೆ ಒಳಪಡಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿರುವ ಪೊಲೀಸರು ಮಗುವಿನ ರಕ್ಷಪರೀಕ್ಷೆ ಮಾಡಿಸಿದ್ದಾರೆ. ಈ ಪರೀಕ್ಷೆ ಮಗುವಿನ ಆರೋಗ್ಯ ದೃಷ್ಟಿಯಿಂದಲೋ ಅಥವಾ ಮುಂದಿನ ತನಿಖೆಯ ದೃಷ್ಟಿಯಿಂದಲೋ ಎಂಬುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

    ಇದನ್ನೂ ಓದಿ: ಒಂದೇ ಮನೆಯ ಐವರ ಸಾವು ಪ್ರಕರಣ: ಶಂಕರ್ ಮನೆಯಲ್ಲಿ ಸಿಕ್ಕ ಅದರಲ್ಲಿದೆಯಾ ಅಂಥ ಮಾಹಿತಿ!?

    ಆತ್ಮಹತ್ಯೆ ನಡೆದ ಐದು ದಿನಗಳ ಬಳಿಕ ಅಂದರೆ ಸೆ. 17ರಂದು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ವಿನಾಯಕ ನಗರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಕೊಳೆತ ಸ್ಥಿತಿಯಲ್ಲಿದ್ದ ಐದು ಶವಗಳ ಜತೆ ಈ ಎರಡೂವರೆ ವರ್ಷದ ಮಗು ನಿತ್ರಾಣ ಸ್ಥಿತಿಯಲ್ಲಿ ಇದ್ದಿದ್ದಳು.

    ಸರ್ಕಾರಿ ಕಚೇರಿಗೆ ನುಗ್ಗಿ ಕೆಎಎಸ್​ ಅಧಿಕಾರಿಗೇ ಕೊಲೆ ಬೆದರಿಕೆ; ಹಣ ಮಂಜೂರು ಮಾಡುವಂತೆ ಧಮ್ಕಿ..

    ರೈಲು-ಟಿಪ್ಪರ್ ಭೀಕರ ಆ್ಯಕ್ಸಿಡೆಂಟ್​; ಅಪಘಾತಕ್ಕೆ ಕಾರಣ ಗೂಗಲ್​!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts