ಒಂದೇ ಮನೆಯ ಐವರ ಸಾವು ಪ್ರಕರಣ: ಶಂಕರ್ ಮನೆಯಲ್ಲಿ ಸಿಕ್ಕ ಅದರಲ್ಲಿದೆಯಾ ಅಂಥ ಮಾಹಿತಿ!?

suicide case
Published on

ಬೆಂಗಳೂರು: ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಒಂದೇ ಮನೆಯ ಐವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಇಂದು ಮತ್ತಷ್ಟು ಸಾಕ್ಷ್ಯ ಲಭಿಸಿದ್ದು, ಇನ್ನಷ್ಟು ಕುತೂಹಲ ಕೆರಳಿಸಿದೆ.

ಶಂಕರ್ ಎಂಬವರ ಮನೆಯಲ್ಲಿ ಈ ಸಾವುಗಳು ಸಂಭವಿಸಿದ್ದು, ಮನೆಯಲ್ಲಿನ ನಾಲ್ವರ ಆತ್ಮಹತ್ಯೆ ಹಾಗೂ ಮಗುವೊಂದರ ಸಾವು ಪ್ರಕರಣ, ಘಟನೆ ನಡೆದ ಕೆಲದಿನಗಳ ಬಳಿಕ ಬೆಳಕಿಗೆ ಬಂದಿದ್ದು, ನಿನ್ನೆ ಭಾರಿ ಗಮನ ಸೆಳೆದಿತ್ತು.

ಇಂದು ಶಂಕರ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅವರ ಮಗ ಮಧುಸಾಗರ್ ಬರೆದಿದ್ದ ಡೈರಿ ಸಿಕ್ಕಿದ್ದು, ಅದನ್ನಾಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮನೆಯವರ ಅಂತ್ಯಸಂಸ್ಕಾರ ನಡೆಸಿದ ಬಳಿ ಶಂಕರ್ ಅವರನ್ನು ಠಾಣೆಗೆ ಕರೆಸಿಕೊಂಡಿರುವ ಪೊಲೀಸರು ಡೈರಿ ಆಧರಿಸಿ ವಿಚಾರಣೆ ಕೈಗೊಂಡಿದ್ದಾರೆ.

ಡೈರಿಯಲ್ಲಿ ಮಧುಸಾಗರ್ ಹಲವು ವಿಷಯಗಳನ್ನು ಉಲ್ಲೇಖಿಸಿದ್ದು, ಅಪ್ಪ-ಮಗನ ಜಗಳದ ವಿಚಾರವೂ ಪ್ರಸ್ತಾಪಿಸಲ್ಪಟ್ಟಿದೆ ಎನ್ನಲಾಗಿದೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಸುಮಾರು ಒಂದು ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net