ಜಿಲ್ಲೆ

ಕುಮಾರಣ್ಣ ಕೈಕಟ್ಟಿ ನಿಲ್ಲುವುದು ಭಯದಿಂದಲ್ಲ ಸಂಸ್ಕಾರದಿಂದ: ಸುಮಲತಾ ಫ್ಯಾನ್ಸ್‌ಗೆ ಎಚ್​ಡಿಕೆ ಫ್ಯಾನ್ಸ್ ಟಾಂಗ್

ಮಂಡ್ಯ: ಕೆಆರ್​ಎಸ್​ ಡ್ಯಾಂನಲ್ಲಿ ಬಿರುಕು ಮತ್ತು ಅಕ್ರಮ ಗಣಿಗಾರಿಕೆ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಷ್​ ಮತ್ತು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ನಡುವೆ ನಡೆದ ಮಾತಿನ ಸಮರಕ್ಕೆ ಉಭಯ ನಾಯಕರೇ ಅಂತ್ಯವಾಡಿದ್ದರೂ ಅಭಿಮಾನಿಗಳ ಕಾದಾಟ ಮಾತ್ರ ಮುಂದುವರಿಯುತ್ತಲೇ ಇದೆ.

ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್​ ಅಥವಾ ಎಚ್​ಡಿಕೆ ಫ್ಯಾನ್ಸ್​ಗೆ ಸುಮಲತಾ ಅಂಬರೀಷ್​ ಅಭಿಮಾನಿಗಳು ಟಾಂಗ್​ ನೀಡಿದ್ದರು. ಅಂಬರೀಷ್​ ಎದುರು ಕುಮಾರಸ್ವಮಿ ಅವರು ಕೈಕಟ್ಟಿ ನಿಂತಿರುವ ಫೋಟೋ ಹಾಕಿ ಫೋಟೋದಲ್ಲಿ ಇಲಿ ಯಾರು ಮತ್ತು ಹುಲಿ ಯಾರೆಂಬುದು ಗೊತ್ತಾಗುತ್ತದೆ ಎಂದು ಕುಟುಕಿದ್ದರು.

ಇದೀಗ ಸುಮಲತಾ ಅಂಬರೀಷ್​ ಅಭಿಮಾನಿಗಳಿಗೆ ಎಚ್​ಡಿಕೆ ಅಭಿಮಾನಿಗಳು ಸಾಲು ಸಾಲು ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಡುವ ಮೂಲಕ ತಿರುಗೇಟು ನೀಡಿದ್ದಾರೆ. ಕುಮಾರಣ್ಣ ಕೈ ಕಟ್ಟಿ ನಿಲ್ಲುವುದು ಭಯದಿಂದ ಅಲ್ಲ ಸಂಸ್ಕಾರದಿಂದ. ಅಂಬರೀಶ್ ಮುಂದೆ ಮಾತ್ರವಲ್ಲ ಸಣ್ಣ ಮಗು ಎದುರು ಸಹ ಕೈ ಕಟ್ಟಿ ನಿಂತಿದ್ದಾರೆ. ಇದು ದೇವೇಗೌಡರು ಕಲಿಸಿಕೊಟ್ಟಿರುವ ಸಂಸ್ಕಾರದಿಂದ ಬಂದಿರುವುದು ಎಂದಿದ್ದಾರೆ.

ನಾಡಿನ ಯಾವ ಪ್ರಜೆ ಬಂದರು ಅವರು ಕೈ ಕಟ್ಟಿನಿಲ್ಲುತ್ತಾರೆ. ಇದನ್ನೇ ನೀನು ಭಯ ಎಂದು ತಿಳಿದರರೇ ನಿಮ್ಮ ಮೂರ್ಖತನ. ಅಂಬರೀಶ್ ಅವರು ಸಹ ಕುಮಾರಣ್ಣನ ಪಕ್ಕ ಕೈ ಕಟ್ಟಿನಿಂತಿದ್ದಾರೆ. ಅದನ್ನೇಲ್ಲಾ ಭಯ ಅನ್ನಾಲ್ಲಾ ಸಂಸ್ಕಾರ ಎನ್ನುತ್ತಾರೆ. ಸಂಸ್ಕಾರ ಗೊತ್ತಿಲ್ಲದವರು ಹೀಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ಈ ಸೋಶಿಯಲ್​ ಮೀಡಿಯಾ ವಾರ್​ ಇನ್ನೆಷ್ಟು ದಿನ ಮುಂದುವರಿಯುತ್ತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)