More

    59ನೇ ವಸಂತಕ್ಕೆ ಕಾಲಿಟ್ಟ ಕರುನಾಡ ಚಕ್ರವರ್ತಿ: ಸರಳವಾಗಿ ಬರ್ತಡೇ ಆಚರಿಸಿಕೊಂಡ ಶಿವಣ್ಣ

    ಬೆಂಗಳೂರು: ಕರುನಾಡ ಚಕ್ರವರ್ತಿ ಹಾಗೂ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅವರು ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದು, ಕುಟುಂಬದ ಜತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಮಕ್ಕಳು ಹಾಗೂ ಮಡದಿಯ ಜತೆಗೆ ಕೇಕ್ ಕತ್ತರಿಸಿ ಶಿವಣ್ಣ ಬರ್ತಡೇ ಆಚರಣೆ ಮಾಡಿಕೊಂಡಿದ್ದಾರೆ. ಕರೊನಾ ಹಿನ್ನಲೆಯಲ್ಲಿ ಅಭಿಮಾನಿಳಿಗೆ ಸಂಭ್ರಮಾಚರಣೆ ಬೇಡ ಅಂತ ಶಿವಣ್ಣ ಮೊದಲೇ ಮನವಿ ಮಾಡಿದ್ದರು. ಅದರಂತೆಯೇ ಅಭಿಮಾನಿಗಳು ಸಂಭ್ರಮದ ಆಚರಣೆಗೆ ಬ್ರೇಕ್​ ಹಾಕಿದ್ದು, ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸರಳವಾಗಿ ಇದ್ದಲ್ಲಿಯೇ ಆಚರಣೆ ಮಾಡಿ ಶುಭ ಕೋರುತ್ತಿದ್ದಾರೆ.

    ಇನ್ನು ಸಿನಿ ಬಳಗವು ಸಹ ಶಿವಣ್ಣರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಶಿವಣ್ಣ ಅವರು ಚಿರಯುವಕನಂತೆಯೇ ಇನ್ನಷ್ಟು ಕಾಲ ನಮ್ಮನ್ನು ರಂಜಿಸಲಿ ಎಂದು ಕೇಳಿಕೊಂಡಿದ್ದಾರೆ.

    ಸಿನಿಮಾ ವಿಚಾರಕ್ಕೆ ಬರುವುದಾದರೆ ಶಿವಣ್ಣ ಅವರು ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಭಜರಂಗಿ-2 ಸಿನಿಮಾ ಸಿದ್ಧವಾಗಿದೆ. ಇಷ್ಟರಲ್ಲಾಗಲೇ ಚಿತ್ರ ತೆರೆಕಾಣಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ವಿಳಂಬವಾಗಿದೆ. ಇನ್ನು ಹೆಸರಿಡದ ಎಸ್​ಆರ್​ಕೆ 123 ಮತ್ತು ವೇದ ಚಿತ್ರಗಳಲ್ಲಿಯೂ ಶಿವಣ್ಣ ಅಭಿನಯಿಸಲಿದ್ದಾರೆ. (ಏಜೆನ್ಸೀಸ್​)

    ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ಉಮಾಪತಿ ಗೌಡರ ಮೇಲೆಯೇ ಮೂಡುತ್ತಿವೆ ಹಲವು ಅನುಮಾನ

    ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ತಪ್ಪೊಪ್ಪಿಕೊಂಡ ಬಂಧಿತ ಆರೋಪಿ

    ಇಂದು ರಾಜ್ಯದಲ್ಲಿ ಪತ್ತೆಯಾದ ಕರೊನಾ ಪ್ರಕರಣಗಳ ಸಂಖ್ಯೆ ಎಷ್ಟು? ಒಂದೂ ಪ್ರಕರಣ ಕಾಣಿಸಿಕೊಳ್ಳದ ಜಿಲ್ಲೆ ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts