ಜಿಲ್ಲೆ

ಒಂದು ದಿನದ ಮಟ್ಟಿಗೆ ಪೊಲೀಸ್​ ಠಾಣಾಧಿಕಾರಿಯಾದ ಪಿಯುಸಿ ಟಾಪರ್ ವಿದ್ಯಾರ್ಥಿನಿ

ಕಲಬುರಗಿ: ಪಿಯುಸಿಯಲ್ಲಿ ಟಾಪರ್ ಬಂದ ವಿದ್ಯಾರ್ಥಿನಿಯನ್ನು ಒಂದು ದಿನದ ಮಟ್ಟಿಗೆ ಪೊಲೀಸ್​ ಠಾಣಾಧಿಕಾರಿಯಾಗಿ ನೇಮಕ ಮಾಡುವ ಮೂಲಕ ಕಲಬುರಗಿ ಜಿಲ್ಲಾ ಪೊಲೀಸರು ವಿಶಿಷ್ಟವಾಗಿ ಮಹಿಳಾ ದಿನವನ್ನು ಆಚರಿಸಿದ್ದಾರೆ.

ವಿಶ್ವ ಮಹಿಳಾ ದಿನಾಚಾರಣೆ ಹಿನ್ನಲೆ ಒಂದು ದಿನದ ಮಟ್ಟಿಗೆ ಅಫಜಲಪುರ ತಾಲ್ಲೂಕಿನ ರೇವೂರ್ ಪೊಲೀಸ್ ಠಾಣೆಯ ಎಸ್​ಎಚ್ಓ ಆಗಿ ಕುಮಾರಿ ಮೇಘಾ ಮೇತ್ರೆಯನ್ನು ನೇಮಕ ಮಾಡಲಾಗಿತ್ತು.

ಒಂದು ದಿನದ ಮಟ್ಟಿಗೆ ರೇವೂರ್ ಠಾಣೆಯ ಸಬ್ ಇನ್ಸ್​ಪೆಕ್ಟರ್​ ಆಗಿ ಮೇಘಾ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ, ಮಹಿಳಾ ದಿನಾಚರಣೆ ಅಂಗವಾಗಿ ಮೇಘಾಳನ್ನು ಪೊಲೀಸ್​ ಅಧಿಕಾರಿಗಳು ಸನ್ಮಾನಿಸಿದ್ದಾರೆ. (ದಿಗ್ವಿಜಯ ನ್ಯೂಸ್​)