ಜಿಲ್ಲೆ

ಹುಟ್ಟೂರಿನ ಸುಧಾರಣೆಗೆ ಮುಂದಾದ ನಟ ಅನಿರುದ್ಧ: ತನ್ನದೇಯಾದ ಕೆಲ ಸುಧಾರಣೆ ಪಟ್ಟಿ ತಯಾರಿ

ಧಾರವಾಡ: ಖ್ಯಾತ ನಟ ಅನಿರುದ್ಧ್ ಅವರು ತಮ್ಮ ಹುಟ್ಟೂರಿನ ಸುಧಾರಣೆಗೆ ಮುಂದಾಗಿದ್ದಾರೆ. ಹುಟ್ಟೂರಿನ ಐತಿಹಾಸಿಕ ಬಾವಿ, ಸ್ಥಳಗಳ ಅಭಿವೃದ್ಧಿಗೆ ಅನಿರುದ್ಧ್​ ಹೊಸ ಪರಿಕಲ್ಪನೆಯೊಂದಿಗೆ ಸಜ್ಜಾಗಿದ್ದಾರೆ.

ವಿದ್ಯಾಕಾಶಿ ಧಾರವಾಡ ನಟ ಅನಿರುದ್ಧ್ ಅವರ ಹುಟ್ಟೂರು. ಈಗಾಗಲೇ ಬೆಂಗಳೂರಿನಲ್ಲಿ ಸ್ವಚ್ಛತಾ ಕಾರ್ಯಗಳನ್ನು ಅನಿರುದ್ಧ್​ ಮಾಡಿದ್ದಾರೆ. ಈಗ ಧಾರವಾಡದಲ್ಲಿ ಸ್ವಚ್ಛತೆಗಾಗಿ ಮೈದಾನಕ್ಕೆ ಇಳಿಯಲಿದ್ದಾರೆ.

ಹು-ಧಾ ಪಾಲಿಕೆಯಿಂದ ಸ್ವಚ್ಛತಾ ರಾಯಭಾರಿಯಾಗಿ ಅನಿರುದ್ಧ್​‌ ಆಯ್ಕೆಯಾಗಿದ್ದು, ಸ್ವಚ್ಛತಾ ಜಾಗೃತಿ ಜೊತೆಗೆ ತನ್ನದೇಯಾದ ಕೆಲ ಸುಧಾರಣೆ ಪಟ್ಟಿಯನ್ನು ಅನಿರುದ್ಧ್​ ಪಾಲಿಕೆಗೆ ಸಲ್ಲಿಸಿದ್ದಾರೆ.

ಕವಿವಿ ಆವರಣದ ಪ್ರಾಯೋಗಿಕ ಸರ್ಕಾರಿ ಶಾಲೆ ಸುಧಾರಣೆಗೆ ಪ್ರಸ್ತಾಪಿಸಿದ್ದಾರೆ. ಸಪ್ತಾಪುರ, ಜಯನಗರದಲ್ಲಿ ಬಸ್ ತಂಗುದಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಐತಿಹಾಸಿಕ ಜತ್ತಿನ್ ಬಾವಿ ಸುಧಾರಣೆಗೆ ಮನವಿ ಮಾಡಿದ್ದಾರೆ. ಗವಳಿಗರ ಎಮ್ಮೆಗಳಿಗಾಗಿ ಕೆರೆ ನೀಡುವಂತೆಯೂ ಕೋರಿಕೆ ಸಲ್ಲಿಸಿದ್ದಾರೆ.

ಧಾರವಾಡ ನಗರ ಸುಂದರ ನಗರ ಮಾಡಲು ಅನೇಕ ಐಡಿಯಾಗಳನ್ನು ಅನಿರುದ್ಧ್ ಕೊಟ್ಟಿದ್ದು, ಅದರ ಅನುಷ್ಠಾನಕ್ಕೆ ಶ್ರಮವಹಿಸಲು ತಯಾರಾಗಿದ್ದಾರೆ. (ದಿಗ್ವಿಜಯ ನ್ಯೂಸ್​)