ಜಿಲ್ಲೆ

ಚಿತ್ರಮಂದಿರದ ಕೆಳಗೆ ಮೊಸಳೆ..; ಇಬ್ಬರು ಆರೋಪಿಗಳ ಬಂಧನ, ಮೊಸಳೆ ಪೊಲೀಸ್ ವಶಕ್ಕೆ..

ಬೆಂಗಳೂರು: ರಾಜಧಾನಿ ಬೆಂಗಳೂರಿನ ಚಿತ್ರಮಂದಿರವೊಂದರ ಕೆಳಗೆ ನೀರಿನ ಟ್ಯಾಂಕ್​ನಲ್ಲಿ ಮೊಸಳೆ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಮೊಸಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಿ ಥಿಯೇಟರ್ ಇರುವ ಕಟ್ಟಡದ ಕೆಳಭಾಗದಲ್ಲಿ ಇಬ್ಬರು ಬಿಳಿ ನೀರಿನ ಕ್ಯಾನ್​ ಒಳಗೆ ಮೊಸಳೆಯನ್ನು ಇರಿಸಿಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಸುಳಿವಿನ ಮೇರಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, ಮೊಸಳೆ ವಶಕ್ಕೆ ಪಡೆದಿದ್ದಾರೆ.

ಜಯನಗರದ ಸೋಮೇಶ್ವರ ನಿವಾಸಿ ಅಬ್ದುಲ್ ಖಾಲಿದ್, ಕನಕಪುರದ ಕಲ್ಲಹಳ್ಳಿ ಬಿ.ಎಸ್. ಗಂಗಾಧರ್ ಬಂಧಿತ ಆರೋಪಿಗಳು. ಇವರು ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.