ಜಿಲ್ಲೆ

ನವಜಾತ ಶಿಶು ಅಪಹರಣ; ಪತ್ತೆಗೆ ಮಾಹಿತಿ ನೀಡಿದವರಿಗೆ 25 ಸಾವಿರ ರೂ. ಬಹುಮಾನ..

ದಾವಣಗೆರೆ: ನವಜಾತ ಶಿಶುವೊಂದರ ಅಪಹರಣವಾಗಿದ್ದು, ಪತ್ತೆಗೆ ಸಹಕರಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ದಾವಣಗೆರೆ ಚಾಮರಾಜಪೇಟೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಇಸ್ಮಾಯಿಲ್ ಜಬೀವುಲ್ಲಾ-ಉಮ್ಮೇಸಲ್ಮಾ ದಂಪತಿಯ ನವಜಾತ ಶಿಶುವನ್ನು ಯಾರೋ ಅಪಹರಿಸಿಕೊಂಡು ಹೋಗಿದ್ದಾರೆ.

ಮಾ. 16ರಂದು ನವಜಾತ ಶಿಶುವನ್ನು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಇದುವರೆಗೂ ಶಿಶು ಹಾಗೂ ಆರೋಪಿ ಇಬ್ಬರ ಸುಳಿವು ಕೂಡ ಸಿಕ್ಕಿಲ್ಲ. ಈ ಕುರಿತು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಳಿವು ನೀಡಿದವರಿಗೆ 25 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ದಾವಣಗೆರೆ ಎಸ್​​ಪಿ ಘೋಷಣೆ ಮಾಡಿದ್ದಾರೆ.