ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಬಗ್ಗೆ ಬೇಸರ ಹೊರಹಾಕಿದ ವಕೀಲೆ ಮೀರಾ ರಾಘವೇಂದ್ರ, "ಎಂಥವರಿಗೆ ಸೆಕ್ಯುರಿಟಿ ಕೊಡುವ ಕಾಲ ನಮ್ಮ ಪೊಲೀಸರಿಗೆ ಬಂತು?" ಎಂದು ತನ್ನ ಫೇಸ್ಬುಕ್ ಪೇಜ್ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ.
"ಈ ಹಿಂದೆ ಇಂಥಹ ಕೇಸ್ಗಳಲ್ಲಿ ಮೃತಪಟ್ಟ ಮಹಿಳೆಯರು ಯಾರಿಗೂ ಬೇಡವಾದರು. ಕರೊನಾಗಿಂತಲೂ ಭಯಾನಕ ಈ ಸಿಡಿ ಕೇಡಿಗಳ ಕಥಾನಕ. ಸಿಡಿ ಕಥನದಲ್ಲಿ ಎಲ್ಲರೂ ವಿಲನ್ಗಳೇ. ಒಂದು ಸಾಲು ಬಹಳ ಇಷ್ಟ ಆಗಿದ್ದು ಹುಡುಗಿ "ತಮ್ಮ" ಹೇಳಿದ ಮಾತು ''ಎರಡು ಹೊತ್ತು ಊಟ ಮಾಡೋಣ ಸಾಕು ಬಾ". ಬಹಳ ಬೇಜಾರಾಗಿದ್ದು ಮಾತ್ರಾ ಎಕ್ಸ್ ಆರ್ಮಿ ತಂದೆಗೆ ಎಂಥಾ ಅವಮಾನ ಈ ಸಿಡಿಯಿಂದ? ದೇವರು ಅವರಿಗೆ ನೋವು ಭರಿಸುವ ಶಕ್ತಿ ಕೊಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿರಿ ಸುಳ್ಳು ದೂರಿಗೆ ನನ್ನಿಂದ ಹೆಂಡತಿ-ಮಕ್ಕಳು ದೂರವಾದರು: ಆರ್. ಅಶೋಕ್ ವಿರುದ್ಧ ಸಿಡಿ ಲೇಡಿ ವಕೀಲ ಜಗದೀಶ್ ವಾಗ್ದಾಳಿ
ಇತ್ತೀಚಿಗೆ ಹಿಂದು ಧರ್ಮದ ಬಗ್ಗೆ ಅವಹೇಳನಾಕಾರಿ ಹೇಳಿಕೆ ಕೊಟ್ಟಿದ್ದ ಪ್ರೊ.ಭಗವಾನ್ ಮುಖಕ್ಕೆ ಕೋರ್ಟ್ ಆವರಣದಲ್ಲೇ ಮಸಿ ಬಳಿಯುವ ಮೂಲಕ ಮೀರಾ ರಾಘವೇಂದ್ರ ಸುದ್ದಿಯಲ್ಲಿದ್ದರು.