ಚಾಮರಾಜನಗರ: ಇತ್ತೀಚಿನ ದಿನಗಳಲ್ಲಿ ಹೃದಯಸಂಬಂಧಿ ಖಾಯಿಲೆಗಳು ಹೆಚ್ಚಾಗಿ ಜನರನ್ನು ಬಾಧಿಸುತ್ತಿದ್ದು, ಯಾವುದೇ ವಯಸ್ಸಿನ ಭೇದವಿಲ್ಲದೇ ಜನರು ಹೃದಯಾಘಾತದಕ್ಕೆ (Heart Attack) ಬಲಿಯಾಗುತ್ತಿದ್ದಾರೆ. ಇದೀಗ ಬೇಕರಿಯಲ್ಲಿ ಕೆಲಸ ಮಾಡುವಾಗ ವ್ಯಕ್ತಿಯೋರ್ವ ಹಠಾಟ್ ಹೃಧಯಘಾತಕ್ಕೆ ಉಸಿರು ಚೆಲ್ಲಿರುವ ಘಟನೆ ನಡೆದಿದ್ದು, ಈ ವಿಚಾರ ಜನರನ್ನು ಆತಂಕಕ್ಕೆ ದೂಡಿದೆ.
ಘಟನೆಯು ಚಾಮರಾಜನಗರ ಜಿಲ್ಲೆಯ ಕೇಕ್ ವಲ್ಡ್ ಬೇಕರಿಯಲ್ಲಿ ನಡೆದಿದ್ದು, ಮೃತರನ್ನು ವೇಣುಗೋಪಾಲ್ (56) ಎಂದು ಗುರುತಿಸಲಾಗಿದ್ದು, ಚಾಮರಾಜಗರ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಭ್ಯವಾಗಿರುವ ಸಿಸಿಟಿವಿ ದೃಶ್ಯ ನೋಡುವುದಾದರೆ, ಬೇಕರಿಯಲ್ಲಿ ಕಸ್ಟಮರ್ ಒಬ್ಬರ ಜೊತೆ ಮಾತನಾಡುತ್ತಿರುವ ವೇಣುಗೋಪಾಲ್ ಕೇಳಿದ ಐಟಮ್ಗಳನ್ನು ಒಂದು ಬಾಕ್ಸ್ಗೆ ಹಾಕಿ ಆ ಬಳಿಕ ಮೇಲೇಳುತ್ತಿರುವಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.