ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಬೆಂಗಳೂರಿನಿಂದಲೇ ಕನ್ನಡಿಗರೊಬ್ಬರು ಫೋನ್ ಮಾಡಿ ಹಿಗ್ಗಾಮುಗ್ಗಾತ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ನೀರು ಟ್ಯಾಂಕರ್ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್ರ ಪೋಟೋ ಸಮೇತ ಮರಾಠಿ ಬೋರ್ಡ್ ಹಾಕಲಾಗಿದೆ. ಮರಾಠಿ ಭಾಷೆಯಲ್ಲಿ 'ಲಕ್ಷ್ಮೀ ತಾಯಿ ಫೌಂಡೇಶನ್ ಕೊಡುಗೆ' ಎಂಬ ಬರಹ ಅದರಲ್ಲಿದೆ. ಇದೇ ವಿಚಾರವಾಗಿ ಕರೆ ಮಾಡಿದ ಬೆಂಗಳೂರಿನ ಸಂತೋಷ್ಗೌಡ, 'ಕರ್ನಾಟಕದಲ್ಲಿದ್ದು ಕನ್ನಡ ಬೋರ್ಡ್ ಹಾಕಬೇಕಾ? ಅಥವಾ ಮರಾಠಿ ಭಾಷೆಯ ಬೋರ್ಡ್ ಹಾಕಬೇಕಾ? ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಇದನ್ನೂ ಓದಿರಿ ಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ
ಗರಂ ಆದ ಸಂತೋಷ್ಗೌಡ, 'ಹಾಗಿದ್ದರೆ ಮಹಾರಾಷ್ಟ್ರದಲ್ಲಿ ಕನ್ನಡ ಬೋರ್ಡ್ ಹಾಕ್ತಾರಾ?' ಎಂದಿದ್ದಾರೆ. ಇದಕ್ಕುತ್ತರಿಸಿದ ಲಕ್ಷ್ಮೀ, 'ಅವರಿಗೆ ಭಾಷೆ ಬರೋದಿಲ್ಲ, ನಾವು ಅವರನ್ನ ಪ್ರತಿನಿಧಿಸುತ್ತೇವಲ್ಲಾ ಅದಕ್ಕೆ...' ಎನ್ನುತ್ತಿದ್ದಂತೆ 'ಮೇಡಂ, ನಾವು ಯಾವ ನೆಲದ ಅನ್ನ ತಿನ್ನುತ್ತೇವೆ... ಆ ಭಾಷೆ ಮಾತನಾಡಬೇಕಲ್ವಾ? ಕನ್ನಡ ನೆಲದಲ್ಲಿ ಕನ್ನಡಿಗರ ತೆರಿಗೆ ಹಣದಲ್ಲೇ ಓಡಾಡುತ್ತೀರಿ, ಮರಾಠಿ ಭಾಷೆ ಬೇಕಾ? ಎಂದು ಸಂತೋಷಗೌಡ ಮಾತಿನಲ್ಲೇ ಚಾಟಿ ಬೀಸಿದ್ದಾರೆ.