ಜಿಲ್ಲೆ

ನೀ ಅಂದ್ರೆ ನನಗಿಷ್ಟ, ಮದುವೆ ಆಗ್ತೀನಿ ಎಂದವನ ಹಿಂದಿತ್ತು ಕರಾಳ ಮುಖ! ಮಹಿಳಾ ಟೆಕ್ಕಿಗೆ ಶಾಕ್​

arunakunigal

ಬೆಂಗಳೂರು: ವಧು-ವರ ಅನ್ವೇಷಣಾ ವೆಬ್​ಸೈಟ್​ನಲ್ಲಿ ಸಿಕ್ಕ ಯುವಕನನ್ನ ನಂಬಿ ಬೆಂಗಳೂರಿನ ಯುವತಿ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾಳೆ. ನೋಡೋಕೆ ಪಕ್ಕಾ ಜೆಂಟಲ್​ಮನ್​ ಥರ ಫೋಸ್​ ಕೊಟ್ಟಿದ್ದ ಯುವಕನ ಮತ್ತೊಂದು ಕರಾಳ ಮುಖ ಅರಿಯುವಷ್ಟರಲ್ಲಿ ಆಕೆ ಭಾರಿ ನಷ್ಟ ಅನುಭವಿಸಿದ್ದಾಳೆ.

ಜೀವನ್ ಸಾಥಿ ಡಾಟ್ ಕಾಂನಲ್ಲಿ ಕಳೆದ ಫೆಬ್ರವರಿಯಲ್ಲಿ ಟೆಕ್ಕಿಯೊಬ್ಬಳು ಮದುವೆ ಪ್ರೊಫೈಲ್ ಕ್ರಿಯೇಟ್ ಮಾಡಿದ್ದಳು. ಯುವತಿಯ ಪ್ರೊಫೈಲ್​ ಅನ್ನು ಲೈಕ್​ ಮಾಡಿದ್ದ ಮಧ್ಯಪ್ರದೇಶ ಮೂಲದ ಅದಿಕರ್ಶ್ ಶರ್ಮಾ ಎಂಬಾತ ಪ್ರಪೋಸಲ್ ಕಳುಹಿಸಿದ್ದ.

ಅದಿಕರ್ಶ್ ಶರ್ಮಾನ ಪ್ರೊಫೈಲ್ ನೋಡಿ ಯುವತಿಯೂ ಓಕೆ ಮಾಡಿದ್ದಳು. ಪರಿಚಯ ಬೆಳೆದಿದ್ದು, ಮದುವೆ ಆಗೋಣ ಎಂದೂ ಆತ ಹೇಳಿದ್ದ. ಆಕೆಯೂ ಮದುವೆ ಆಗುವ ಖುಷಿಯಲ್ಲೇ ಇದ್ದಳು.

ಬೆಂಗಳೂರಿನಲ್ಲಿ ಬಿಜಿನೆಸ್ ಮಾಡ್ತೀನಿ. ಹಣ ಕಡಿಮೆ ಆಗಿದೆ ಎಂದು ಯುವಕ ಪುಂಗಿಬಿಟ್ಟಿದ್ದ. ಹೇಗೋ ತಾನು ಮದುವೆ ಆಗುವ ಹುಡುಗ ಅಲ್ಲವೇ ಎಂದು ಮಹಿಳಾ ಟೆಕ್ಕಿಯು ಬ್ಯಾಂಕಿನಿಂದ 10 ಲಕ್ಷ ರೂ. ಲೋನ್ ಪಡೆದು ಆತನಿಗೆ ಕೊಟ್ಟಿದ್ದಳು. ನೀ ಅಂದ್ರೆ ನನಗಿಷ್ಟ, ಮದುವೆ ಆಗ್ತೀನಿ ಎನ್ನುತ್ತಿದ್ದವ, ಹಣ ಕೈ ಸೇರುತ್ತಿದ್ದಂತೆ ತನ್ನ ಮೊಬೈಲ್ ಸ್ವಿಚ್ ಆಫ್​ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಮೋಸಹೋದ ಮಹಿಳಾ ಟೆಕ್ಕಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.