ಜಿಲ್ಲೆ

ಸ್ಟೇರಿಂಗ್ ಕಟ್​ ಆಗಿ ಪ್ರಪಾತಕ್ಕೆ ಉರುಳಿ ಬಿದ್ದ ಜೀಪ್; ಒಂದು ಸಾವು, 12 ಮಂದಿಗೆ ಗಾಯ, ಮೂವರ ಸ್ಥಿತಿ ಚಿಂತಾಜನಕ

ಚಾಮರಾಜನಗರ: ಕರೊನಾ ಹಾವಳಿಯಿಂದ ಈಗಾಗಲೇ ಕಂಗೆಟ್ಟಿರುವ ಚಾಮರಾಜನಗರದ ಜನರಿಗೆ ಈಗ ಭೀಕರ ಅಪಘಾತದ ಸುದ್ದಿಯೊಂದು ಬಂದೆರಗಿದೆ. ಸ್ಟೇರಿಂಗ್ ಕಟ್ ಆದ ಕಾರಣ ಒಂದು ಜೀಪ್​ ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಚಾಮರಾಜನಗರ ಮಲೈಮಹದೇಶ್ವರ ಬೆಟ್ಟದಲ್ಲಿ ಈ ಅಪಘಾತ ಸಂಭವಿಸಿದೆ. ಜೀಪ್​ನಲ್ಲಿದ್ದವರೆಲ್ಲ ತುಳಸೀಕೆರೆ ಗ್ರಾಮದವರಾಗಿದ್ದು, ಇವರೆಲ್ಲ ಇಂಡಿ ಇಂಡಿ ಬಸವೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಪಘಾತದಲ್ಲಿ ತುಳಸೀಕೆರೆಯ ವೀರಣ್ಣ (75) ಮೃತ ಪಟ್ಟಿದ್ದಾರೆ.

ಜೀಪ್​ 30 ಅಡಿ ಆಳಕ್ಕೆ ಉರುಳಿ ನಜ್ಜುಗುಜ್ಜಾಗಿದೆ. ಪ್ರಯಾಣಿಕರ ಪೈಕಿ 12 ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ತಮಿಳುನಾಡಿನ ಮೆಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.