dks ramesh jarakiholi cd case 
ಜಿಲ್ಲೆ

ಡಿಕೆಶಿ ವಿರುದ್ಧ ದೂರು ದಾಖಲಿಸಲು ವಕೀಲರೊಂದಿಗೆ ರಮೇಶ್ ಚರ್ಚೆ

ಬೆಂಗಳೂರು: ಸಿಡಿ ಪ್ರಕರಣದಲ್ಲಿ ಇನ್ನೊಂದು ದೂರು ನೀಡುವ ಸಂಬಂಧ ರಮೇಶ್ ಜಾರಕಿಹೊಳಿ ವಕೀಲರ ಜತೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ದೂರು ನೀಡುವ ಕುರಿತಂತೆ ವಿಚಾರ ವಿನಿಮಯ ನಡೆಸಿದ್ದು, ದೂರು ನೀಡಿದರೆ ಪೋಲಿಸ್ ಠಾಣೆಗೆ ನೀಡಬೇಕೇ, ಇಲ್ಲವೇ ಎಸ್‌ಐಟಿಗೆ ಸಾಕ್ಷ್ಯಗಳನ್ನು ನೀಡಿ ದೂರು ನೀಡಬೇಕೆ ಎಂಬ ಬಗ್ಗೆ ಭಾನುವಾರ ಚರ್ಚೆ ನಡೆಸಿದರು.

ಯಾವ ಸಂಗತಿ ಆಧಾರದಲ್ಲಿ ದೂರು ಕೊಡಬೇಕು, ಅದಕ್ಕೆ ಪೂರಕವಾಗಿ ಯಾವ ಮಾಹಿತಿ ಸಲ್ಲಿಸಬೇಕು ಎಂಬ ಬಗ್ಗೆ ಅವರ ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆಂದು ಗೊತ್ತಾಗಿದೆ.