ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್ ಸಿಡಿ ಪ್ರಕರಣದ 'ಸಂತ್ರಸ್ತ' ಯುವತಿ ಮೊಬೈಲ್ನಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ನಗರದಲ್ಲಿ ಯುವತಿ ವಾಸವಿದ್ದ ಪಿಜಿಯನ್ನು ಮಹಜರು ಮಾಡಿದ್ದ ವೇಳೆ ಕಪಾಟಿನಲ್ಲಿ ಆಕೆಯ ಮೊಬೈಲ್ ಸಿಕ್ಕಿತ್ತು. ಪೊಲೀಸರು ಸೀಜ್ ಮಾಡಿದ್ದ ಈ ಮೊಬೈಲ್ ಅನೇಕ ಕಥೆಯನ್ನ ಹೇಳುತ್ತಿದೆ.
ಕೆಲಸದ ಆಮಿಷವೊಡ್ಡಿ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮೋಸ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ಆರೋಪಿಸಿದ್ದಳು. ಇದಕ್ಕೆ ಪುಷ್ಠಿ ನೀಡಿದೆ ಮೊಬೈಲ್ನಲ್ಲಿನ ಚಾಟಿಂಗ್. 'ಕೆಲಸ ತಾನೇ.. ಹೇ ಕೊಡ್ಸ್ತಿನಿ ಬಿಡ್' ಅನ್ನೋ ಸಾಕ್ಷಿ ಈಗ ಪತ್ತೆಯಾಗಿದೆ. ಈ ಮೆಸೇಜ್ ಆರೋಪಿ ವಿರುದ್ಧ ದೊಡ್ಡ ಸಾಕ್ಷಿಯಾಗಿದೆ. ಇದು ಮಲ್ಲೇಶ್ವರಂ ಪಿಜಿ ಹೆಸರಿನ ನಂಬರ್ನಿಂದ ಬಂದಿದೆ.
ಸಿಡಿ ಲೇಡಿಯ ಮೊಬೈಲ್ನಲ್ಲಿ ವಿಡಿಯೋ ಕಾಲ್, ಇನ್ ಕಮಿಂಗ್ ಕಾಲ್ ಬಂದಿರುವ ಬಗ್ಗೆ ಸ್ಕ್ರೀನ್ಶಾಟ್ಸ್, ವಿಡಿಯೋ ರೆಕಾರ್ಡ್ ಪತ್ತೆಯಾಗಿವೆ. ಆ ಮೂಲಕ ಆರೋಪಿಗೂ 'ಸಂತ್ರಸ್ತ' ಯುವತಿಗಿದ್ದ ಸಂಪರ್ಕದ ಸಾಕ್ಷಿಗಳು ಲಭ್ಯವಾಗಿವೆ. ಈ ಸಾಕ್ಷಿಗಳನ್ನು ತನಿಖಾಧಿಕಾರಿ ಕವಿತಾ ಸಂರಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್)