ಬೆಂಗಳೂರು: ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ಕೇಸ್ ಪ್ರಕರಣ ಸಂಬಂಧ ಕೆಲವರ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿದ್ದ ವೇಳೆ ಮಹತ್ವದ ದಾಖಲೆಗಳು ಮತ್ತು ಲಕ್ಷ ಲಕ್ಷ ಹಣ ಸಿಕ್ಕಿದೆ.
ಸಿಡಿ ಕೇಸ್ನ ಶಂಕಿತ ಕಿಂಗ್ಪಿನ್ ನರೇಶ್ಗೌಡನ ಮನೆಯಲ್ಲಿ 18.5 ಲಕ್ಷದ 'ಸ್ವರ್ಣ' ಸಂಪತ್ತು ಪತ್ತೆಯಾದರೆ, ಸಿಡಿ ಲೇಡಿ ಮನೆಯಲ್ಲಿ ಲಕ್ಷಾಂತರ ನಗದು ಸಿಕ್ಕಿದೆ. ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿಯ ಮನೆ ಆರ್.ಟಿ. ನಗರದಲ್ಲಿದ್ದು, ನಿನ್ನೆ ರಾತ್ರಿ ಎಸ್ಐಟಿ ದಾಳಿ ಮಾಡಿತ್ತು. ಆ ವೇಳೆ 9.2 ಲಕ್ಷ ನಗದು, ಖಾಲಿ ಬಿಯರ್ ಬಾಟಲಿಗಳು, ವೈನ್, ವಿಸ್ಕಿ ಬಾಟಲಿ, ಪ್ಯಾಕ್‌ಗಟ್ಟಲೆ ಕಿಂಗ್ ಸಿಗರೇಟ್ ಪತ್ತೆಯಾಗಿದೆ. ಇದನ್ನೂ ಓದಿರಿ ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ
ಇನ್ನು ಸಿಡಿ ಕೇಸ್ನ ಶಂಕಿತ ಕಿಂಗ್ಪಿನ್ ನರೇಶ್ಗೌಡ ನಿವಾಸದಲ್ಲಿ 18.5 ಲಕ್ಷ ಮೌಲ್ಯಕ್ಕೆ ಚಿನ್ನ ಖರೀದಿ ಮಾಡಿರುವ ರಶೀದಿ, ಮನೆಯಲ್ಲಿ ಲ್ಯಾಪ್ಟಾಪ್, ಪೆನ್ಡ್ರೈವ್ ಸೇರಿ ಇತರ ದಾಖಲೆಗಳು ಸಿಕ್ಕಿವೆ. ಪತ್ತೆಯಾದ ಹಣದ ಮೂಲದ ಕುರಿತು ಎಸ್ಐಡಿ ತನಿಖೆ ನಡೆಸುತ್ತಿದ್ದು, ಸಿಡಿ ಡೀಲ್‌ಗೆ ಯುವತಿ ಹಣ ಪಡೆದಿದ್ದಳಾ? ಅನ್ನೋ ಅನುಮಾನ ಮೂಡಿದೆ.