ಪಲ್ಟಿಯಾದ ಬಸ್​  
ಜಿಲ್ಲೆ

ರಾಜ್ಯದಲ್ಲಿ ಮತ್ತೊಂದು ಬಸ್​ ಅಪಘಾತ; 40 ಮಂದಿ ಪ್ರಯಾಣಿಕರಿದ್ದ KKRTC ಬಸ್ ಪಲ್ಟಿ

Webdesk - Manjunatha B

ಕಲಬುರಗಿ: ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಪಲ್ಟಿಯಾಗಿ ಹಲವರು ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಕಾಳಗಿ ಬಳಿ ನಡೆದಿದೆ.

40 ಮಂದಿ ಪ್ರಯಾಣಿಕರನ್ನು ಹೊತ್ತು ಚಿಂಚೋಳಿ ಕಡೆಯಿಂದ ಬೆಂಗಳೂರಿಗೆ ಹೊರಟ್ಟಿದ್ದ ಬಸ್​ ಕಾಳಗಿ ಬಳಿ ಪಲ್ಟಿಯಾಗಿದೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ.

ಪಲ್ಟಿಯಾದ ಬಸ್​

ಈ ಕುರಿತು ಪ್ರತಿಕ್ರಿಯಿಸಿರುವ​ ಅಧಿಕಾರಿ ಒಬ್ಬರು ಚಿಂಚೋಳಿ ಕಡೆಯಿಂದ ಬೆಂಗಳೂರಿನತ್ತ ಹೊರಟ್ಟಿದ್ದ ಬಸ್​ ಕಾಳಗಿ ಬಳಿ ಪಲ್ಟಿಯಾಗಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಒಬ್ಬರಿಗೆ ಕಣ್ಣು ಹಾಗೂ ಇನ್ನೊಬ್ಬರ ಕಾಲಿಗೆ ಗಂಭಿರವಾಗಿ ಗಾಯವಾಗಿದೆ.

ರಟ್​ಕಲ್​ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಬಸ್​ ಪಲ್ಟಿಯಾಗಲು ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.