ಬೀದರ್: ದಿನೇ ದಿನೇ ಬೀದರ್ನಲ್ಲಿ ಕರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸುತ್ತಿದ್ದು, ನಗರದ ಓಲ್ಡ್ ಸಿಟಿ ಒಂದೇ ಪ್ರದೇಶದಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳಿವೆ. ಪರಿಸ್ಥಿತಿ ಹೀಗಿದ್ದರೂ ಖುದ್ದು ಶಾಸಕರೇ ಮುಂದೆ ನಿಂತು ಸೀಲ್‌ಡೌನ್ ಪ್ರದೇಶವನ್ನು ಓಪನ್ ಮಾಡಿಸಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ದೆಹಲಿಗೆ ಹೋಗಿ ಬಂದ ಓಲ್ಡ್ ಸಿಟಿಯ ಜನರಿಂದಲೇ ಬೀದರ್ಗೆ ಕರೊನಾ ಸೊಂಕು ಬಂದಿದ್ದು, 67 ಸೊಂಕಿತರ ಪೈಕಿ ಸುಮಾರು 50ಕ್ಕೂ ಹೆಚ್ಚು ಓಲ್ಡ್ ಸಿಟಿಯ ನಿವಾಸಿಗಳಾಗಿದ್ದಾರೆ.
ಬೀದರ್ ಜನರಲ್ಲಿ ಕೋವಿಡ್-19 ಕುರಿತು ದಿನೇ ದಿನೇ ಆತಂಕ ಹೆಚ್ಚಾಗುವ ಸಂದರ್ಭದಲ್ಲಿ ಶಾಸಕ ರಹೀಮ್ ಖಾನ್ ಜಿಲ್ಲಾಡಳಿತದ ಮೇಲೆ ರಂಜಾನ್ ಹಬ್ಬ ಇದೆ ಎಂದು ನಾನಾ ಒತ್ತಡ ಹೇರುವ ಮೂಲಕ ಸೀಲ್‌ಡೌನ್ ಏರಿಯಾವನ್ನು ತೆರೆಸಿರುವುದು ಬೀದರ್ ಜನರಲ್ಲಿ ಭಯ ಉಂಟಾಗಲು ಕಾರಣವಾಗಿದೆ.
ಜಮಾತ್ಗೆ ಹೋಗಿ ಬಂದವರಿಗೆ ಸೊಂಕು ತಗುಲಿದ ಹಿನ್ನಲೆಯಲ್ಲಿ ಇಡೀ ಓಲ್ಡ್ ಸಿಟಿಯನ್ನು ಶಾಸಕರೇ ಮುಂದೆ ನಿಂತು ಸೀಲ್ ಡೌನ್ ಮಾಡಿಸಿದ್ದರು. ಇದೀಗ ಓಪನ್ ಮಾಡಿಸಿರುವುದು ಭೀತಿಗೆ ಎಡೆಮಾಡಿಕೊಟ್ಟಿದ್ದು, ಇನ್ನೂ ಜಿಲ್ಲಾಡಳಿತ ಓಲ್ಡ್ ಸಿಟಿಯ ಸಾಕಷ್ಟು ಮನೆಯ ಸದಸ್ಯೆರಿಗೆ ಟೆಸ್ಟ್ ಮಾಡಿಸಿದ್ದು. 2293 ಜನರ ವರದಿ ಬರಬೇಕಿದೆ. (ದಿಗ್ವಿಜಯ ನ್ಯೂಸ್)