ಒಳ ಉಡುಪು ಕಾಣುವಂತೆ ಪಿಪಿಇ ಗೌನ್ ತೊಟ್ಟಿದ್ದ ನರ್ಸ್​ಗೆ ಬಂಪರ್​ ಆಫರ್​!

Nurse Nadiya
Published on

ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದ ಆಸ್ಪತ್ರೆಯೊಂದರಲ್ಲಿ ಪುರುಷರ ವಾರ್ಡ್​ನಲ್ಲಿ ನರ್ಸ್​ ಒಬ್ಬಳು ಒಳ ಉಡುಪು ಕಾಣುವಂತೆ ಪಾರದರ್ಶಕ ಪಿಪಿಇ ರಕ್ಷಣಾ ಗೌನ್ ಧರಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ನರ್ಸ್​ಗೆ ಬಂಪರ್​ ಆಫರ್​ ಒಂದು ಒಲಿದು ಬಂದಿದೆ.

ನರ್ಸ್​ ನಾದಿಯಾ (23) ನಡೆಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಅವಳ ವಿರುದ್ಧ ಕೇಳಿಬಂದಿದ್ದ ಶಿಸ್ತಕ್ರಮವನ್ನು ರದ್ದುಗೊಳಿಸಲು ಆಸ್ಪತ್ರೆಯ ಮುಖ್ಯಸ್ಥರಿಗೆ ತುಂಬಾ ಒತ್ತಾಯಗಳು ಕೇಳಿಬಂದಿವೆ. ಇದರೊಟ್ಟಿಗೆ ಆಸ್ಪತ್ರೆಯ ವಾರ್ಡ್​ನಲ್ಲಿ ಸಿಬ್ಬಂದಿಯ ಚಿತ್ರ ತೆಗೆದ ರೋಗಿಗಳ ವಿರುದ್ಧವೂ ಅಭಿಯಾನ ಶುರುವಾಗಿದೆ.

ಇನ್ನೊಂದೆಡೆ ನಾದಿಯಾ ಅವರ ಕ್ರಮಕ್ಕೆ ಮನಸೋತಿರುವ "ಮಿಸ್​ ಎಕ್ಷ್​ ಲಿಂಗೇರಿ ಬ್ರ್ಯಾಂಡ್​"ನ ಮುಖ್ಯಸ್ಥರಾದ ಅನಸ್ತಾಸಿಯಾ ಯಕುಶೇವಾ ಅವರು ಮಾತನಾಡಿ, ನಮ್ಮ ಒಳ ಉಡುಪಿನ ಬ್ರ್ಯಾಂಡ್​ಗೆ ತುಳಾ ಆಸ್ಪತ್ರೆಯ ನರ್ಸ್​ ಅನ್ನು ಮಾಡೆಲ್​ ಆಗಿ ಮಾಡಲು ಬಯಸುತ್ತೇವೆ ಎಂದು ಆಫರ್​ ನೀಡಿದ್ದಾರೆ.

ನಾದಿಯಾ ಒಳ ಉಡುಪಿನ ಮೇಲೆ ಪಿಪಿಇ ರಕ್ಷಣಾ ಗೌನ್​ ಅನ್ನು ಧರಿಸಿರುವ ಫೋಟೋವನ್ನು ದಕ್ಷಿಣ ಮಾಸ್ಕೋದಿಂದ 100 ಮೈಲಿ ದೂರದಲ್ಲಿರುವ ತುಳಾ ಆಸ್ಪತ್ರೆಯ ಪುರುಷರ ವಾರ್ಡ್​ನಲ್ಲಿದ್ದ ಕರೊನಾ ರೋಗಿಗಳು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ನಾದಿಯಾ, ಪಿಪಿಇ ಗೌನ್​​ ಜತೆ ನರ್ಸ್​ ಯೂನಿಫಾರ್ಮ್​ ಧರಿಸುವುದರಿಂದ ತುಂಬಾ ಸೆಕೆಯಾಗುತ್ತದೆ ಎಂದು ಹೇಳಿಕೊಂಡಿದ್ದಳು. ಅಲ್ಲದೆ, ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಧರಿಸಿದ್ದ ಪಿಪಿಇ ಗೌನ್​ ಪಾರ್ದರ್ಶಕವಾಗಿದೆ ಎಂದು ನನಗೆ ತಿಳದೇ ಇರಲಿಲ್ಲ ಎಂದು ಆಸ್ಪತ್ರೆಯ ಮ್ಯಾನೇಜರ್​ ಬಳಿ ಸ್ಪಷ್ಟನೆ ಕೂಡ ನೀಡಿದ್ದಳು.

ಇದರ ಹೊರತಾಗಿಯೂ ನರ್ಸ್​ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡು ವರದಿ ನೀಡಲು ಪ್ರಾದೇಶಿಕ ಆರೋಗ್ಯ ಸಚಿವಾಲಯ ಆದೇಶಿಸಿತ್ತು. ಸಾಂಕ್ರಾಮಿಕ ರೋಗದ ಎಚ್ಚರಿಕೆಯ ನಡುವೆಯೂ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು.

ಇನ್ನು ಕರೊನಾ ವಾರ್ಡ್​ನಲ್ಲಿರುವ ರೋಗಿಯೊಬ್ಬರು ಆಕೆಯ ಬಗ್ಗೆ ಮಾತನಾಡಿ, ಕೆಲವೊಂದು ಮುಜುಗರ ಬಿಟ್ಟರೆ, ಆಕೆ ಆ ರೀತಿ ಉಡುಪು ಧರಿಸಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದಿದ್ದರು.

ಸಾಮಾಜಿಕ ಜಾಲತಾಣದಲ್ಲಿ ನರ್ಸ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕರು ಆಕೆಯ ಬೆಂಬಲಕ್ಕೂ ನಿಂತಿದ್ದಾರೆ. ನರ್ಸ್ ಹಾಸ್ಯಪ್ರಜ್ಞೆ ಮೆಚ್ಚುವಂಥದ್ದು ಎಂದು ಸ್ಥಳೀಯ ಪತ್ರಕರ್ತರೊಬ್ಬರು ಹೊಗಳಿದ್ದಾರೆ. ಮತ್ತೊಬ್ಬರು ಎಲ್ಲರೂ ಆಕೆಯ ವಿರುದ್ಧ ಧ್ವನಿ ಏರಿಸುತ್ತಿದ್ದಾರೆ. ಆದರೆ, ಅದರಿಂದಾಗುವ ಸೆಕೆ ಎಷ್ಟೆಂಬುದರ ಬಗ್ಗೆ ಗಮನ ಹರಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ನರ್ಸ್​ಗೆ ಶಿಕ್ಷಿಸುವ ಬದಲು ಬಹುಮಾನ ನೀಡಿ. ಆಕೆಯ ದೈಹಿಕ ಸೌಂದರ್ಯ ನೋಡಿ ಯಾರೊಬ್ಬರು ಸಾಯಲು ಇಚ್ಛಿಸುವುದಿಲ್ಲ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಾರೆ ಎಂದಿದ್ದಾರೆ.

ಇದೀಗ ನಾದಿಯಾ ಅವರಿಗೆ ಮಾಡೆಲ್​ ಆಗುವ ಅವಕಾಶವೂ ಒದಗಿ ಬಂದಿದ್ದು, ಅವಳ ವಿರುದ್ಧದ ಶಿಸ್ತುಕ್ರಮ ತೆಗೆದುಕೊಳ್ಳದಂತೆಯೂ ಸಾಕಷ್ಟು ಮನವಿಗಳು ಕೇಳಿಬಂದಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net