More

    ಹೀಗೂ ಆಗುವುದುಂಟು: ವಾಯುವಿಹಾರಕ್ಕೆ ಹೋದಾಗ ಲಕ್ಷಾಧಿಪತಿ, ಕಸದೊಂದಿಗೆ ಬಂದಾಗ ಕೋಟ್ಯಧಿಪತಿ..!

    ವಾಷಿಂಗ್ಟನ್: ಅದೃಷ್ಟ ಯಾವಾಗ, ಹೇಗೆ ಹುಡುಕಿ ಬರುತ್ತದೆಯೋ ತಿಳಿಯುವುದೇ ಇಲ್ಲ. ಎಷ್ಟೋ ಮಂದಿ ದುಡ್ಡಿನ ಬೆನ್ನತ್ತಿ ಹೋದರೂ ಲಕ್ಷ್ಮಿ ಅವರಿಗೆ ಒಲಿಯುವುದೇ ಇಲ್ಲ, ಅದೇ ಕೆಲವು ಮಂದಿಗೆ ಬೇಡ ಬೇಡೆ ಎಂದರೂ ದುಡ್ಡು ಅವರು ನಿಂತಲ್ಲಿಯೇ ಬಂದುಬಿಡುತ್ತದೆ.

    ಇಲ್ಲಿ ಹೇಳಹೊರಟಿರುವುದು ಎರಡನೆಯ ಗುಂಪಿಗೆ ಸೇರಿದ ವ್ಯಕ್ತಿಗಳು! ಲಾಕ್​ಡೌನ್​ ಹಿನ್ನೆಲೆಯಲ್ಲಿ ವಾಷಿಂಗ್ಟನ್​ನ ದಂಪತಿ ತಿಂಗಳುಗಟ್ಟಲೆ ಮನೆಯಲ್ಲಿ ಸುಮ್ಮನೇ ಕುಳಿತಿದ್ದರು, ಈಗ ಅಲ್ಲಿಯೇ ಲಾಕ್​ಡೌನ್​ ಸ್ವಲ್ಪ ಸಡಿಲಿಕೆ ಮಾಡಿದ್ದರಿಂದ ಕಾರಿನಲ್ಲಿ ವಾಯುವಿಹಾರಕ್ಕೆ ಹೋಗಿದ್ದರು. ಬರಿಗೈಯಲ್ಲಿ ಹೋಗಿದ್ದ ಅವರು ಮನೆಯ ಬರುವಾಗ ಒಂದಲ್ಲ, ಎರಡಲ್ಲ… ಬರೋಬ್ಬರಿ ಏಳೂವರೆ ಕೋಟಿ ಹಣವನ್ನು ಕೈಯಲ್ಲಿ ಹಿಡಿದು ತಂದರು.

    ಇದನ್ನೂ ಓದಿ: ಕರೊನಾ ಬಿಕ್ಕಟ್ಟು: ಹೆಚ್ಚಿದ ಬಿಎಸ್‌ವೈ ವರ್ಚಸ್ಸು- ಪಕ್ಷದೊಳಗಿನ ವಿರೋಧಿಗಳು ಗಪ್‌ಚುಪ್!

    ಹಾಗೆಂದು ಅವರೇನೂ ಬ್ಯಾಂಕ್​ಗೆ ಹೋದವರಲ್ಲ, ಅಥವಾ ಲಾಟರಿ ಆಡಿದವರೂ ಅಲ್ಲ. ಹಾಗಿದ್ದರೆ ಇಷ್ಟೊಂದು ದುಡ್ಡು ಸಿಕ್ಕಿದ್ದು ಹೇಗೆ ಎನ್ನುವುದು ಮಾತ್ರ ಬಹಳ ವಿಚಿತ್ರವಾಗಿದೆ.

    ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆಯಲ್ಲಿ ಡೇವಿಡ್ ಮತ್ತು ಎಮಿಲಿ ದಂಪತಿ ಕಾರಿಯನಲ್ಲಿ ಸುತ್ತಾಡಲು ಹೋದಾಗ ರಸ್ತೆಯ ಮೇಲೆ ಅವರಿಗೆ ಎರಡು ಮೂಟೆ ಕಂಡಿದೆ. ಯಾರೋ ಕಸವನ್ನು ರಸ್ತೆಯಲ್ಲಿ ಎಸೆದು ಹೋಗಿದ್ದಾರೆಂದು ಭಾವಿಸಿದ ಅವರು ಸಮೀಪದಲ್ಲಿ ಡಸ್ಟ್​ಬಿನ್​ ಇಲ್ಲದ ಹಿನ್ನೆಲೆಯಲ್ಲಿ ತಮ್ಮ ಕಾರಿನಲ್ಲಿಯೇ ಹಾಕಿಕೊಂಡಿದ್ದಾರೆ. ಎಲ್ಲಿಯಾದರೂ ಡಸ್ಟ್​ಬಿನ್​ ಸಿಕ್ಕರೆ ಎಸೆಯೋಣ ಎಂಬ ಒಳ್ಳೆಯ ಯೋಚನೆ ಮಾಡಿದ್ದಾರೆ.

    ಇದನ್ನೂ ಓದಿ:  ಕ್ವಾರಂಟೈನ್​ ಗೋಲ್​ಮಾಲ್​? ಒಳ್ಳೆ ಸೌಲಭ್ಯ ಮಾತ್ರ ಕೇಳ್ಲೇಬೇಡಿ, ದುಡ್ಡು ಕೊಟ್ರೆ ಹೊರಗಡೆ ಆರಾಮಾಗಿ ಹೋಗಿ…

    ಆದರೆ ಲಾಕ್​ಡೌನ್​ ಹಿನ್ನೆಲೆಯಲ್ಲಿ ಎಲ್ಲಿಯೂ ಕಸದ ಡಬ್ಬ ಕಾಣಿಸಲಿಲ್ಲ. ಆದ್ದರಿಂದ ವಾಪಸ್​ ಮನೆಗೆ ತಂದು ಡಸ್ಟ್​ಬಿನ್​ಗೆ ಎಸೆಯಲು ಹೋದರು. ಆದರೆ ಒಮ್ಮೆ ಅದರಲ್ಲಿ ಏನಿದೆ ಎಂದು ನೋಡೋಣವೆಂದುಕೊಂಡು ತೆಗೆದರೆ ದಂಗಾಗಿ ಹೋದರು ದಂಪತಿ. ಏಕೆಂದರೆ ಅದರಲ್ಲಿ ನೋಟಿನ ಕಂತೆ ಕಂತೆ ಇತ್ತು. ಅದೂ ಸಾವಿರ ಸಾವಿರವೂ ಅಲ್ಲ… ಲಕ್ಷ ಲಕ್ಷವೂ ಅಲ್ಲ…. ಲೆಕ್ಕ ಹಾಕುತ್ತಾ ಹೋದ ದಂಪತಿ ಸುಸ್ತಾಗಿ ಹೋದರು. ಏಕೆಂದರೆ ಅದರಲ್ಲಿ ಇದ್ದುದು ಬರೋಬ್ಬರಿ ಒಂದು ಮಿಲಿಯನ್​ ಅಮೆರಿಕನ್​ ಡಾಲರ್​. ರೂಪಾಯಿಯಲ್ಲಿ ಎಷ್ಟು ಗೊತ್ತಾ? ಸುಮಾರು ಏಳು ಕೋಟಿ 38 ಲಕ್ಷ!

    ಹಣ ಕಂಡರೆ ಹೆಣನೂ ಬಾಯಿಬಿಡುತ್ತೆ ಎನ್ನುತ್ತಾರೆ. ಆದರೆ ಈ ದಂಪತಿ ಹಣದ ಹಿಂದೆ ಹೋಗಲಿಲ್ಲ. ಬದಲಿಗೆ ಅದನ್ನು ಪೊಲೀಸ್​ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ. ಆ ಹಣ ಯಾರದ್ದು? ಅದು ರಸ್ತೆಯ ಮೇಲೆ ಹೇಗೆ ಬಂತು? ಅಷ್ಟಕ್ಕೂ ಲಾಕ್​ಡೌನ್​ ಸಮಯದಲ್ಲಿ ಎಲ್ಲೆಡೆ ಖಾಲಿ ಖಾಲಿ ಇರುವಾಗಲೂ ಹಣ ಬಿದ್ದದ್ದು ಅದರ ಮಾಲೀಕರಿಗೆ ಏಕೆ ತಿಳಿದಿಲ್ಲ ಇತ್ಯಾದಿಯಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಆನ್​ಲೈನ್​ ಮದ್ಯಪ್ರಿಯರಿಗೆ ಬಿತ್ತಲ್ಲಪ್ಪೋ ಗಾಳ! ಎಣ್ಣೆ ಕುಡಿಯುವ ಮೊದಲೇ ಏರಿಬಿಟ್ಟಿತು ನಶೆ…

    ಅಷ್ಟಕ್ಕೂ ಕರ್ನಾಟಕದಲ್ಲಿಯೇ ಕೆಲವು ಕಡೆಗಳಲ್ಲಿ ಹಣವನ್ನು ಗೊತ್ತೋ, ಗೊತ್ತಿಲ್ಲದೆಯೋ ಎಸೆದು ಆತಂಕ ಸೃಷ್ಟಿಸಿರುವ ಘಟನೆಗಳೂ ನಡೆದಿದೆ ಎನ್ನಿ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ನೋಟನ್ನು ಯಾರೂ ಮುಟ್ಟುವ ಧೈರ್ಯ ಮಾಡದೇ ಪೊಲೀಸರಿಗೆ ವಿಷಯ ತಿಳಿಸಿದ್ದರು! (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts