ಜಿಲ್ಲೆ

ಲಾರಿ ಅಡಿಮೇಲಾಗಿ ಬಿದ್ದರೂ ಬಚಾವ್ ಆದ ಚಾಲಕ; ಬತ್ತ ತುಂಬಿದ್ದ ವಾಹನ ಟಯರ್ ಬ್ಲಾಸ್ಟ್​ ಆಗಿ ಪಲ್ಟಿ..

Webdesk - Ravikanth

ರಾಯಚೂರು: ಟಯರ್ ಬ್ಲಾಸ್ಟ್ ಆಗಿ ಲಾರಿಯೊಂದು ಪಲ್ಟಿಯಾಗಿ ಅಡಿಮೇಲಾಗಿ ಬಿದ್ದಿದ್ದರೂ ಚಾಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾಯಚೂರು ತಾಲೂಕಿನ ದುಗನೂರು ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ.

ಭತ್ತ ತುಂಬಿದ್ದ ಲಾರಿ ಸಾಗುತ್ತಿದ್ದಾಗ ಟಯರ್ ಸ್ಫೋಟಗೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮಗುಚಿ ಬಿದ್ದಿದ್ದು, ಸಂಪೂರ್ಣ ಅಡಿಮೇಲಾಗಿದೆ. ಅದಾಗ್ಯೂ ಚಾಲಕ ಪವಾಡಸದೃಶವಾಗಿ ಬದುಕುಳಿದಿದ್ದಾನೆ.

ಅಪಘಾತದ ಪರಿಣಾಮವಾಗಿ ಭತ್ತದ ಚೀಲಗಳು ಚೆಲ್ಲಾಪಿಲ್ಲಿಯಾಗಿದ್ದು, ಸಾಕಷ್ಟು ನಷ್ಟ ಉಂಟಾಗಿದೆ. ಇಡನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚೆಲ್ಲಾಪಿಲ್ಲಿಯಾದ ಭತ್ತದ ಮೂಟೆಗಳು