ಜಿಲ್ಲೆ

ಅನುಮಾನಾಸ್ಪದವಾಗಿ ಪತ್ನಿ ಸತ್ತ 5 ದಿನಕ್ಕೆ ಸಾವಿನ ಮನೆಯ ಕದ ತಟ್ಟಿದ ಟೆಕ್ಕಿ! ಕಳೆದ ತಿಂಗಳಷ್ಟೆ ಮದ್ವೆ ಆಗಿದ್ದವರ ಬದುಕಲ್ಲಿ ದುರಂತ

arunakunigal

ಮೈಸೂರು: ಒಂದು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ದಂಪತಿ ಬದುಕು ದುರಂತ ಅಂತ್ಯ ಕಂಡಿದೆ. ಮನೆಯಲ್ಲಿ ಅನುಮಾನಾಸ್ಪದವಾಗಿ ಪತ್ನಿ ಸತ್ತ ಐದೇ ದಿನಕ್ಕೇ ಗಂಡ ಜೈಲಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ಸಂಭವಿಸಿದೆ.

ನಗರದ ಶ್ರೀರಾಂಪುರ ಎಸ್‌ಬಿಎಂ ಕಾಲನಿ ನಿವಾಸಿಗಳಾದ ಆಶಾರಾಣಿ (28) ಮತ್ತು ಪ್ರದೀಪ್ ಕುಮಾರ್ (33) ಮೃತ ದುರ್ದೈವಿಗಳು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ ಪ್ರದೀಪ್ ಕುಮಾರ್ ಜತೆ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ಆಶಾರಾಣಿಗೆ ಕಳೆದ ತಿಂಗಳು ಮದುವೆ ಆಗಿತ್ತು. ಈ ದಂಪತಿ ಮೈಸೂರಿನಲ್ಲಿ ವಾಸವಿದ್ದರು. ಮೇ 8ರಂದು ನೇಣುಬಿಗಿದ ಸ್ಥಿತಿಯಲ್ಲಿ ಆಶಾರಾಣಿ ಮೃತದೇಹ ಮನೆಯಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿರಿ ಚಾಮರಾಜನಗರ ಆಕ್ಸಿಜನ್​ ದುರಂತ: ರೋಹಿಣಿ ಸಿಂಧೂರಿ ಸೇಫ್​​, ಕೊನೆಗೂ ಆ ದಿನದ ರಹಸ್ಯ ಬಿಚ್ಚಿಟ್ಟ ಸಮಿತಿ

ಆಶಾರಾಣಿ ಪೋಷಕರು ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಅಳಿಯ ಪ್ರದೀಪ್ ಕುಮಾರ್ ಹಾಗೂ ಈತನ ತಾಯಿ ಸರೋಜ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಬ್ಬರನ್ನೂ ಪೊಲೀಸರು ಮೇ 10ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದರಿಂದ ಮನನೊಂದ ವಿಚಾರಣಾಧೀನ ಖೈದಿ ಪ್ರದೀಪ್ ಕುಮಾರ್ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಬೆಡ್​ಶೀಟ್​ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಾಗಿತ್ತು.