ಜಿಲ್ಲೆ

ಶೆಟ್ಟರ್ ಸಾಹೇಬ್ರ ಸಿಬಿಟಿ ಖಾಲಿ ಐತ್ರಿ.. ಕೋವಿಡ್ ಕೇರ್ ಸೆಂಟರ್ ಮಾಡ್ರಿ... ಕೈ ಮುಗಿತೀವಿ

Dharwad

ಹುಬ್ಬಳ್ಳಿ: ಶೆಟ್ಟರ್ ಸಾಹೇಬ್ರ ಸಿಬಿಟಿ ಖಾಲಿ ಐತ್ರಿ. ಕೋವಿಡ್ ಕೇರ್ ಸೆಂಟರ್ ಮಾಡ್ರಿಪಾ...

ಸಾರ್ವಜನಿಕರಿಂದ ಹೀಗೊಂದು ಭಿನ್ನಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ನಗರದಲ್ಲಿ 4 ಅಂತಸ್ತಿನ ಸಿಬಿಟಿ ಕಟ್ಟಡವನ್ನು ನಿರ್ವಿುಸಲಾಗಿದೆ. ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.

ಈಗೀಗ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯ 7 ಸರ್ಕಾರಿ ಹಾಗೂ 30 ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಕಾಡಲಾರಂಭಿಸಿದೆ. ಇಂತಹ ದೊಡ್ಡ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಮಾಡುವುದರಿಂದ ರೋಗಿಗಳ ಆರೈಕೆ ಸುಗಮವಾಗಿ ನಡೆಯಲಿದೆ. ಅಲ್ಲದೆ ಕಟ್ಟಡವೂ ಬಳಕೆಯಾಗಲಿದೆ. ಇಲ್ಲವಾದರೆ, ಇದ್ದ ಕಟ್ಟಡವೂ ನಿರ್ವಹಣೆ ಕೊರತೆಯಿಂದ ಮತ್ತಷ್ಟು ಹಾಳಾಗಲಿದೆ ಎಂಬುದು ಸಾರ್ವಜನಿಕರ ಆಕ್ರೋಶ.

ಬೆಡ್​ಗಳಿಲ್ಲದೆ ಜನರು ಬೀದಿಗೆ ಬೀಳುವ ಮುನ್ನ ಸಚಿವ ಜಗದೀಶ ಶೆಟ್ಟರ್ ಅವರು ಎಚ್ಚೆತ್ತುಕೊಳ್ಳಬೇಕು. ಇಂತಹ ಕಟ್ಟಡ ಬಳಕೆಗೆ ಶೀಘ್ರವೇ ಆದೇಶ ಮಾಡಬೇಕು. ಇಲ್ಲವಾದರೆ ನಿಮ್ಮ ಆಡಳಿತ ದುರಾವಸ್ಥೆಗೆ ಹಿಡಿದ ಕೈಗನ್ನಡಿಯಾಗಲಿದೆ ಎಂದು ಸಾರ್ವಜನಿಕರು ಸಿಟ್ಟು ಹೊರಹಾಕಿದ್ದಾರೆ.