ಜಿಲ್ಲೆ

ನಂಜನಗೂಡಿನಲ್ಲಿ ವಿಷ ಇಟ್ಟು 2 ಚಿರತೆಯನ್ನು ಕೊಂದ ಕಿಡಿಗೇಡಿಗಳು!

ಮೈಸೂರು: ಕಿಡಿಗೇಡಿಗಳ ಅಟ್ಟಹಾಸಕ್ಕೆ ಎರಡು ಚಿರತೆಗಳು ಬಲಿಯಾದ ಘಟನೆ ನಂಜನಗೂಡು ತಾಲೂಕಿನಲ್ಲಿ ಸಂಭವಿಸಿದೆ.

ನಂಜನಗೂಡು ತಾಲೂಕಿನ ಕಡಬೂರು ಗ್ರಾಮದ ರಾಮನಾಯಕ ಎಂಬುವರ ಶುಂಠಿ ಬೆಳೆ ಮತ್ತು ಬಾಳೆ ತೋಟದಲ್ಲಿ 5 ವರ್ಷದ ಹೆಣ್ಣು ಚಿರತೆ ಮತ್ತು 1 ವರ್ಷದ ಮರಿ ಚಿರತೆ ಶವಗಳು ಗುರುವಾರ ಬೆಳಗ್ಗೆ ಪತ್ತೆಯಾಗಿವೆ.

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಗಳಿಗೆ ದರುಳರು ವಿಷವಿಕ್ಕಿ ಕೊಂದಿದ್ದಾರೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ನಂಜನಗೂಡಿನ ಅರಣ್ಯ ಇಲಾಖಾಧಿಕಾರಿ ರಕ್ಷಿತ್, ಜನಾರ್ದನ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು,