ಜಿಲ್ಲೆ

ಒಂದೇ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಶಿಕ್ಷಕರು ಕರೊನಾಗೆ ಬಲಿ!

arunakunigal

ಬಾಗಲಕೋಟೆ: ಮಹಾಮಾರಿ ಕರೊನಾ ಸೋಂಕಿಗೆ ಶಿಕ್ಷಕರು ಬಲಿಯಾಗುತ್ತಿರುವ ಸಾವಿನ ಸರಣಿ ಜಿಲ್ಲೆಯಲ್ಲಿ ಮುಂದುವರಿದಿದೆ. ಇಂದು ದೇವನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ‌ಮುಖ್ಯ ಶಿಕ್ಷಕ‌‌‌ ಬಿ.ಎಚ್. ಬಾಲರೆಡ್ಡಿ(52) ಕರೊನಾದಿಂದ ಮೃತಪಟ್ಟಿದ್ದಾರೆ.

ಮೇ 1ರಿಂದ 10ರವರೆಗೆ ಈಗಾಗಲೇ 10 ಮಂದಿ ಶಿಕ್ಷಕರು ಜಿಲ್ಲೆಯಲ್ಲಿ ಕೋವಿಡ್​ ಬಲಿಯಾಗಿದ್ದಾರೆ. ಈ ಪೈಕಿ ಜಮಖಂಡಿ ತಾಲೂಕಿನಲ್ಲಿ ಮೂವರು, ಮುಧೋಳ ಮತ್ತು ಹುನಗುಂದ ತಾಲೂಕಿನಲ್ಲಿ ತಲಾ ಇಬ್ಬರು, ಬಾಗಲಕೋಟೆ, ಬೀಳಗಿ, ಬಾದಾಮಿ ತಾಲೂಕಿನಲ್ಲಿ ತಲಾ ಒಬ್ಬರು ಶಿಕ್ಷಕರು. ಇವರ ಜತೆಗೆ ಬಾಗಲಕೋಟೆ ತಾಲೂಕಿನಲ್ಲಿ ಒಬ್ಬರು ಬೋಧಕೇತರ ಸಿಬ್ಬಂದಿಯೊಬ್ಬರು ಕೋವಿಡ್​ಗೆ ಬಲಿಯಾಗಿದ್ದಾರೆ ಎಂದು ಬಾಗಲಕೋಟೆ ಡಿಡಿಪಿಐ ಶ್ರೀಶೈಲ ಬಿರಾದಾರ ಮಾಹಿತಿ ನೀಡಿದ್ದಾರೆ. ಮೇ 10ರ ನಂತರ ಈ ಐದು ದಿನಗಳಲ್ಲಿ ಮೃತಪಟ್ಟವರ ಮಾಹಿತಿ ಇನ್ನೂ ಸಂಗ್ರಹ ಆಗಿಲ್ಲ.