ಜಿಲ್ಲೆ

ಪ್ರೀತಿಸಿ ಮದುವೆಯಾದ ಎರಡೇ ವರ್ಷದಲ್ಲಿ ಸಂಚು ಮಾಡಿ ಪತ್ನಿಯನ್ನೇ ಕೊಂದನಾ ಪತಿ?

ನೆಲಮಂಗಲ: ಮೂರನೇ ಮಹಡಿಯಿಂದ ನೂಕಿ ಪತ್ನಿಯನ್ನು ಕೊಂದಿರುವ ಆರೋಪ ಯುವಕನೊಬ್ಬನ ವಿರುದ್ಧ ಕೇಳಿಬಂದಿದೆ.

ಚೈತ್ರ (20) ಮೃತ ಮಹಿಳೆ. ಬೆಂಗಳೂರು ಉತ್ತರ ತಾಲೂಕಿನ ಸಿದ್ದನಹೊಸಹಳ್ಳಿಯಲ್ಲಿ ಘಟನೆ ನಡೆದಿದ್ದು, ಮೃತಳ ಪೋಷಕರು ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಮಾಡಿದ್ದಾರೆ.

ಪತಿ ಕಾಂತರಾಜು (24) ಹಾಗೂ ಮೃತ ಚೈತ್ರ ಕಳೆದ 2 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ತಾವು ಬಾಡಿಗೆ ಮನೆಯಲ್ಲಿ ವಾಸವಿದ್ದ ಕಟ್ಟಡದ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾನೆಂದ ಆರೋಪಿಸಲಾಗಿದೆ.

ಸದ್ಯ ಆರೋಪಿ ಕಾಂತರಾಜುನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪೂರ್ಣ ತನಿಖೆಯ ಬಳಿಕ ಸತ್ಯಾಸತ್ಯತೆ ಬಯಲಾಗಲಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)