ಜಿಲ್ಲೆ

ಶಿವಮೊಗ್ಗ | ಎರಡು ಬಸ್​ಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರ ಮೃತ್ಯು, ಹಲವರಿಗೆ ಗಾಯ

Webdesk - Manjunatha B

ಶಿವಮೊಗ್ಗ: ಎರಡು ಬಸ್​ಗಳ ನಡುವೆ ಮುಖಾಮುಖಿಯಾಗಿ ಭೀಕರ ರಸ್ತೆ ಅಪಘಾತ ಆಗಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ಕುಂಸಿ ಬಳಿಯ ಚೋರಡಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ಹಲವಾರು ಮಂದಿ ಮೃತಪಟ್ಟಿದ್ದು ಸಾವಿಗೀಡಾದವರ ಸಂಖ್ಯೆ ಇನ್ನು ಖಚಿತವಾಗಿಲ್ಲ.

ಮುಖಾಮುಖಿ ಡಿಕ್ಕಿ

ಶಿಕಾರಿಪುರದಿಂದ ಶಿವಮೊಗ್ಗ ನಗರದ ಕಡೆಗೆ ಬರುತ್ತಿದ್ದ ವೆಂಕಟಮಹಾಲಕ್ಷ್ಮೀ ಹೆಸರಿನ ಖಾಸಗಿ ಬಸ್​ ಹಾಗೂ ಶಿವಮೊಗ್ಗದಿಂದ ಶಿಕಾರಿಪುರದೆಡೆಗೆ ತೆರಳುತ್ತಿದ್ದ ಶ್ರೀನಿವಾಸ ಹೆಸರಿನ ಬಸ್​ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.

ಶಿವಮೊಗ್ಗ-ಸಾಗರ ರಸ್ತೆಯ ಚೋರಡಿ ಬಳಿ ಇರುವ ಕುಮದ್ವತಿ ಬಳಿ ಘಟನೆ ನಡೆದಿದ್ದು ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಒಂದರೊಳಗೊಂದು ಸಿಲುಕಿಕೊಂಡ ಬಸ್​ಗಳು

ಅಪಘಾತದ ಭೀಕರವಾಗಿದ್ದು ಎರಡು ಬಸ್​ಗಳು ಒಂದರೊಳಗೊಂದು ಸಿಲುಕಿಕೊಂಡಿವೆ. ಸಾವಿಗೀಡಾದವರ ಸಂಖ್ಯೆ ಬಗ್ಗೆ ಇನ್ನು ತಿಳಿದಿಲ್ಲ ಎಂದು ಪ್ರತ್ಯಕ್ಷದರ್ಶಿ ಒಬ್ಬರು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್​ ಕುಮಾರ್​ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಹಲವರಿಗೆ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.