ಅಟೆಂಡರ್​ನಿಂದ ಶಾಲಾ ಬಾಲಕಿಗೆ ಕಿರುಕುಳ; ಆರೋಪಿ ವಶಕ್ಕೆ

School
Published on

ನವದೆಹಲಿ: ನಾ;ಲ್ಕು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಶಾಲಾ ಅಟೆಂಡರ್​ನನ್ನು ವಶಕ್ಕೆ ಪಡೆದಿದ್ಧಾರೆ.

ಬಂಧಿತ ಆರೋಪಿ ಹೆಸರು ಸುನೀಲ್​ ಕುಮಾರ್​(43) ಎಂದು ತಿಳಿದು ಬಂದಿದ್ದು ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಶಾಲೆಯಲ್ಲಿ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ.

ಗುರುತು ಆಧರಿಸಿ ಬಂಧನ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿ ಒಬ್ಬರು ಸಂತ್ರಸ್ತ ಬಾಲಕಿಯ ತಾಯಿ ದಕ್ಷಿಣ ರೋಹಿಣಿ ಪೊಲೀಸ್​ ಠಾಣೆಯಲ್ಲಿ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ದೂರನ್ನು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ಬಾಲಕಿಯ ವಿಚಾರಣೆ ನಡೆಸಿದಾಗ ಆರೋಪಿ ದಪ್ಪ ಮೀಸೆ ಬಿಟ್ಟಿರುವುದಾಗಿ ಬಾಲಕಿ ಹೇಳಿದ್ದಳು. ಗುರುತನ್ನು ಆಧರಿಸಿ ಅಪರಾಧಿಯನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ವಿವಿಧ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲು

ಆರೋಪಿ ಶಾಲಾ ಅಟೆಂಡರ್​ ವಿರುದ್ಧ ಭಾರತ ದಂಡ ಸಂಹಿತೆ(IPC Section) 354, ಸೆಕ್ಷನ್​ 10ರ ಅಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಬಾಲಕಿಯನ್ನು ಶಾಲೆಗೆ ಮಾರ್ಚ್​ 1ರಂದು ಸೇರಿಸಲಾಗಿತ್ತು ಘಟನೆ ಬಳಿಕ ವೈದ್ಯರು ಆಪ್ತ ಸಮಾಲೋಚನೆ ನಡೆಸಿದ ಬಳಿಕ ಆರೋಪಿಯನ್ನು ಸಂತ್ರಸ್ತೆ ಗುರುತು ಹಿಡಿದ ಕಾರಣ ನಾವು ಅವರನ್ನು ಬಂಧಿಸಿದ್ದೆವು ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net