ಸುಶಾಂತ್ ಸಿಂಗ್ ಆತ್ಮಹತ್ಯೆಯ ನಂತರದ ದಿನಗಳಲ್ಲಿ ಬಾಲಿವುಡ್ನ ದೊಡ್ಡ ಸೆಲೆಬ್ರಿಟಿಗಳ ಮೇಲೆ ತಿರುಗಿಬಿದ್ದಿದ್ದ ನಟಿ ಕಂಗನಾ ರಣಾವತ್, ನಂತರ ರಾಹಕಾರಣಿಗಳನ್ನೂ ಬಿಡಲಿಲ್ಲ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಜಗತ್ತಿನ ಬೆಸ್ಟ್ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಟೀಮ್ ಕಂಗನಾ ಟಾಂಗ್ ನೀಡಿತ್ತು.
ಇದನ್ನೂ ಓದಿ: ತೆಲುಗು ಬಾಕ್ಸರ್ನಲ್ಲಿ ಉಪೇಂದ್ರ
ಇದೀಗ ಅವರ ಮಗ ಆದಿತ್ಯ ಠಾಕ್ರೆ ಮೇಲೂ ಟೀಮ್ ಕಂಗನಾ ತಿರುಗಿ ಬಿದ್ದಿದೆ. ಇತ್ತೀಚೆಗೆ ಸುಶಾಂತ್ ಪ್ರಕರಣದ ಬಗ್ಗೆ ಮಾತನಾಡಿದ್ದ ಆದಿತ್ಯ, ಆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ವಿರೋಧ ಪಕ್ಷಗಳು ಮಾಡುತ್ತಿರುವ ಡರ್ಟಿ ಪಾಲಿಟಿಕ್ಸ್ ಎಂದಿ್ದರು. ಈ ವಿಷಯವಾಗಿ ಟ್ವೀಟ್ ಮಾಡಿರುವ ಕಂಗನಾ ಅವರ ಪ್ರಚಾರ ತಂಡ, 'ಡರ್ಟಿ ಪಾಲಿಟಿಕ್ಸ್ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ನೋಡಿ. ನಿಮ್ಮಪ್ಪ ಮುಖ್ಯಮಂತ್ರಿ ಹೇಗಾದರು ಅಂತ ಎಲ್ಲರಿಗೂ ಗೊತ್ತಿದೆ' ಎಂದು ಹೇಳಿತ್ತು.
ಜತೆಗೆ ಸುಶಾಂತ್ ಸಾವಿನ ಕುರಿತಾಗಿ ಏಳು ಪ್ರಶ್ನೆಗಳನ್ನು ಎತ್ತಿದ್ದ ಕಂಗನಾ ಅವರ ತಂಡ, 'ಸುಶಾಂತ್ ಸಾವಿನ ಬಗ್ಗೆ ಕೇಳಿದರೆ ಡರ್ಟಿ ಪಾಲಿಟಿಕ್ಸ್ ಎನ್ನುತ್ತೀರಾ. ಅದೆಲ್ಲಾ ಬಿಟ್ಟಾಕಿ, ಸುಶಾಂತ್ ಸಾವಿನ ಬಗ್ಗೆ ಉತ್ತರಿಸುವುದಕ್ಕೆ ನಿಮ್ಮಪ್ಪನಿಗೆ ಹೇಳಿ' ಎಂದು ಆದಿತ್ಯಾಗೆ ಸವಾಲು ಹಾಕಿದ್ದರು.
ಹೀಗೆ ಸವಾಲು ಹಾಕುವ ಮೂಲಕ ಎಲ್ಲರ ಗಮನಸೆಳೆದಿರುವ ಕಂಗನಾ, ಅದೇ ರೀತಿ ಹಲವರ ಕುತೂಹಲಕ್ಕೂ ಕಾರಣರಾಗಿದ್ದಾರೆ. ಏಕೆಂದರೆ, ಯಾವುದೇ ಒಂದು ವ್ಯವಸ್ಥೆಯ ವಿರುದ್ಧ ಮಾತನಾಡುವುದಕ್ಕೆ ನಿಜಕ್ಕೂ ಧೈರ್ಯ ಬೇಕು. ಅದರಲ್ಲೂ ಕಂಗನಾ ತಮ್ಮ ಮಾತುಗಳ ಮೂಲಕ ರಾಜ್ಯದ ಮುಖ್ಯಮಂತ್ರಿ ಮತ್ತು ಅವರ ಮಗನನ್ನೇ ಎದುರು ಹಾಕಿಕೊಂಡಿದ್ದಾರೆ. ಕಂಗನಾಗೆ ಇಷ್ಟೊಂದು ಧೈರ್ಯ ಹೇಗೆ ಬಂತು ಎಂದು ಹಲವರು ತಲೆ ಕೆಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಟ ಸುಶಾಂತ್ ಸಾವು, ಸಿಬಿಐ ತನಿಖೆಗೆ ಕೇಂದ್ರ ಸಮ್ಮತಿ
ಇದಕ್ಕೆ ಉತ್ತರವಾಗಿ, ಭಾರತೀಯ ಜನತಾ ಪಕ್ಷ ಇದರ ಹಿಂದಿದೆ ಎಂದು ಹೇಳಲಾಗುತ್ತಿದೆ. ಬಹುಶಃ ಕಂಗನಾ ಒಬ್ಬಂಟಿಯಾಗಿದ್ದರೆ, ಇಂಥದ್ದೊಂದು ಧೈರ್ಯ ಮತ್ತು ಸಾಹಸಕ್ಕೆ ಕೈಹಾಕುತ್ತಿರಲಿಲ್ಲವೇನೋ? ಆದರೆ, ಪಕ್ಷದ ಸಪೋರ್ಟ್ ಆಕೆಗೆ ಇರುವುದರಿಂದ, ಇಷ್ಟೊಂದು ಧೈರ್ಯವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.