More

    ತೆಲುಗು ಬಾಕ್ಸರ್​ನಲ್ಲಿ ಉಪೇಂದ್ರ

    ಬೆಂಗಳೂರು: ಲಾಕ್​ಡೌನ್ ಮತ್ತು ಕರೊನಾ ಹಾವಳಿಯಿಂದಾಗಿ ಉಪೇಂದ್ರ ಅವರು ಸಿನಿಮಾಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಬದಿಗಿಟ್ಟು, ಕೃಷಿ ಮತ್ತು ಪ್ರಜಾಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಗೆಬಗೆಯ ಸಲಹೆಗಳನ್ನು ನೀಡುತ್ತ ಸುದ್ದಿಯಲ್ಲಿದ್ದಾರೆ. ಇದೀಗ ಅವರ ಕಡೆಯಿಂದ ಸಿನಿಮಾ ಸಂಬಂಧಿ ಸುದ್ದಿಯೊಂದು ಹೊರಬಿದ್ದಿದೆ. ಹಾಗಂತ ಅದು ಸ್ಯಾಂಡಲ್​ವುಡ್ ಸಿನಿಮಾ ಸುದ್ದಿ ಅಲ್ಲ. ಬದಲಿಗೆ ಪಕ್ಕದ ಟಾಲಿವುಡ್​ನದ್ದು!

    ಉಪೇಂದ್ರ ಮತ್ತೆ ಟಾಲಿವುಡ್​ಗೆ ಪ್ರಯಾಣ ಮಾಡುತ್ತಿದ್ದಾರೆ. 2015ರಲ್ಲಿ ಅಲ್ಲು ಅರ್ಜುನ್ ಜತೆಗೆ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲಿ ನಟಿಸಿದ್ದ ಅವರು, ಇದೀಗ ಸುದೀರ್ಘ ಐದು ವರ್ಷದ ಬಳಿಕ ಮತ್ತೆ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಹಾಗಾದರೆ ಯಾವ ಸಿನಿಮಾ? ಏನು ಕಥೆ? ಎಂಬ ಪ್ರಶ್ನೆಗಳು ಸಹಜ. ವರುಣ್ ತೇಜ್ ಮುಖ್ಯಭೂಮಿಕೆ ನಿಭಾಯಿಸಲಿರುವ ‘ಬಾಕ್ಸರ್’ ಚಿತ್ರದಲ್ಲಿ ಮುಖ್ಯ ಪಾತ್ರವೊಂದನ್ನು ಉಪೇಂದ್ರ ಮಾಡಲಿದ್ದಾರೆ. ಈ ವಿಚಾರವನ್ನು ‘ವಿಜಯವಾಣಿ’ಗೆ ತಿಳಿಸಿರುವ ಉಪೇಂದ್ರ, ‘ಬಾಕ್ಸರ್’ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ.

    ಇನ್ನು ಟಾಲಿವುಡ್​ನಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ವರುಣ್ ತೇಜ ತಂದೆಯಾಗಿ ಉಪೇಂದ್ರ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಕೆಲವೆಡೆ ಬಾಕ್ಸಿಂಗ್ ಹಿನ್ನೆಲೆಯ ಸಿನಿಮಾ ಆಗಿರುವುದರಿಂದ ತರಬೇತುದಾರನಾಗಿಯೂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರಬೀಳಲಿದ್ದು, ಉತ್ತರ ಸಿಗಲಿದೆ. ಕಿರಣ್ ಕೊರ›ಪಾಟಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ‘ದಬಾಂಗ್ 3’ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಚೆಲುವೆ ಸಾಯಿ ಮಂಜ್ರೇಕರ್ ವರುಣ್​ಗೆ ಜೋಡಿಯಾಗಲಿದ್ದಾರೆ.

    ದಿಶಾ​ ಮರಣೋತ್ತರ ವರದಿಯಲ್ಲಿದೆ ನಿಗೂಢತೆ: ಮತ್ತೊಂದು ತಿರುವು ಪಡೆಯುತ್ತಾ ಆತ್ಮಹತ್ಯೆ ಕೇಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts