More

    ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಸೋನು

    ಬೆಂಗಳೂರು: ನಟಿ ಸೋನು ಗೌಡ ಸದ್ಯ ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡು, ಸಕ್ರಿಯರಾಗಿದ್ದಾರೆ. ಇದೆಲ್ಲದರ ನಡುವೆ ಅಭಿಮಾನಿಗಳಿಗಿದ್ದ ಕುತೂಹಲಕ್ಕೆ ಉತ್ತರ ನೀಡಿದ್ದಾರೆ.

    ಹೌದು, ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಂಡು, ‘ನನ್ನ ಸೌಂದರ್ಯದ ಗುಟ್ಟೇನು ಗೊತ್ತೆ’ ಎಂದು ಪ್ರಶ್ನಿಸಿಕೊಂಡು, ಅದಕ್ಕೆ ಅವರೇ ಉತ್ತರವನ್ನೂ ಹೇಳಿದ್ದಾರೆ. ‘ಚೂರು ಸಮಯ ಸಿಕ್ಕರೆ ಸಾಕು ಎಲ್ಲೆಂದರಲ್ಲಿ ಮಲಗಿಬಿಡುತ್ತೇನೆ. ಅದು ಕ್ಯಾರವಾನ್ ಆಗಿರಲಿ, ಶೂಟಿಂಗ್ ಸೆಟ್ ಇರಲಿ, ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗಲೇ ಆಗಿರಲಿ … ನಾನು ಯಾವುದನ್ನೂ ಯೋಚಿಸದೆ ನಿದ್ದೆಗೆ ಜಾರುತ್ತೇನೆ. ಹಾಗೆ ನಿದ್ದೆ ಮಾಡುವುದೇ ನನ್ನ ಸೌಂದರ್ಯದ ಗುಟ್ಟು. ಒಳ್ಳೆಯ ನಿದ್ದೆ ಮತ್ತು ಮನಸ್ಸು ನಿಮ್ಮನ್ನು ಚೆನ್ನಾಗಿಡುತ್ತದೆ ಎಂಬುದು ನನ್ನ ಸಲಹೆ’ ಎಂದು ಹೇಳಿಕೊಂಡಿದ್ದಾರೆ.

    ಈ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ ಸೋನು, ‘ಸಹಜವಾಗಿ ಒತ್ತಡದ ಬದುಕಿನಲ್ಲಿ, ಎಲ್ಲರಿಗೂ ಅಷ್ಟು ಸುಲಭವಾಗಿ ನಿದ್ದೆ ಬರಲ್ಲ. ನಾನು ಮಾತ್ರ ಹಾಗಲ್ಲ. ಮನೆಯಲ್ಲಿ ಮಲಗುವುದು ಕಡಿಮೆ. ಪ್ರಯಾಣದಲ್ಲಂತೂ ನಿದ್ದೆ ಫಿಕ್ಸ್. ಅದ್ಹೇಗೆ ಎಲ್ಲೆಂದರಲ್ಲಿ ನಿದ್ದೆ ಬರುತ್ತೆ ನಿಂಗೆ? ಎಂದು ಸಾಕಷ್ಟು ಮಂದಿ ಕೇಳಿದ್ದುಂಟು. ನನಗನಿಸಿದ ಮಟ್ಟಿಗೆ ಅದು ನನಗೆ ಸಿಕ್ಕ ವರವಿರಬಹುದು’ ಎನ್ನುತ್ತಾರೆ. ಸದ್ಯ ಹಲವು ಚಿತ್ರಗಳನ್ನು ಒಪ್ಪಿಕೊಂಡಿರುವ ಸೋನು, ಶೂಟಿಂಗ್ ಶುರುವಾಗುವುದನ್ನೇ ಕಾಯುತ್ತಿದ್ದಾರೆ. ‘ಕಳೆದ ನಾಲ್ಕು ತಿಂಗಳಿಂದ ಮನೆಯಲ್ಲಿಯೇ ಕುಳಿತು ಸಾಕಾಗಿದೆ. ಒಪ್ಪಿಕೊಂಡ ಸಿನಿಮಾಗಳ ಚಿತ್ರೀಕರಣ ಯಾವಾಗ ಶುರುವಾಗುತ್ತದೆಯೋ ಎಂದೆನಿಸುತ್ತಿದೆ’ ಎನ್ನುತ್ತಾರೆ.

    ದಿಶಾ​ ಮರಣೋತ್ತರ ವರದಿಯಲ್ಲಿದೆ ನಿಗೂಢತೆ: ಮತ್ತೊಂದು ತಿರುವು ಪಡೆಯುತ್ತಾ ಆತ್ಮಹತ್ಯೆ ಕೇಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts