- ಸಮಂತಾ ಪ್ರೆಗ್ನೆನ್ಸಿ ವದಂತಿ ಸಿನಿರಂಗದಲ್ಲಿ ತಲ್ಲಣ ಸೃಷ್ಟಿಸಿದೆ
- ಪತಿ ರಾಜ್ ನಿಧಿಮೋರು ಜೊತೆಗಿನ ಕೇಕ್ ಕಟಿಂಗ್ ವಿಡಿಯೋ ವೈರಲ್
- ಲೇಡಿ ಸೂಪರ್ ಸ್ಟಾರ್ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ
ಸಿನಿಮಾ: ಸದ್ಯ ಸೌತ್ ಬ್ಯುಟಿ ಸಮಂತಾ ಇದೇ ವಾರ ಬಿಡುಗಡೆಯಾಗಿರುವ ಮಾ ಇಂಟಿ ಬಂಗಾರಂ ಸಿನಿಮಾದ ಯಶಸ್ಸಿನಲ್ಲಿ ಬ್ಯುಸಿ ಆಗಿದ್ದಾರೆ. ಜೂನ್ 19 ರಂದು ತೆರೆಕಂಡಿರುವ ಈ ಸಿನಿಮಾ ಶುಭಾರಂಭವನ್ನು ಮಾಡಿದೆ. ಆದರೆ ಇತ್ತೀಚೆಗೆ ಸಮಂತಾಳ ದೇಹದಲ್ಲಿ ಸ್ವಲ್ಪ ಮಟ್ಟಿಗಿನ ಬದಲಾವಣೆ ಕಂಡುಬಂದಿದ್ದು, ಸಮಂತಾ ಗರ್ಭವತಿ (Samantha Pregnancy) ಆಗಿದ್ದಾರೆ ಎಂಬ ಟಾಕ್ ಸಿನಿರಂಗದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಗರ್ಭಧರಿಸಿದ್ದಾರಾ ಸಮಂತಾ?
ಕೆಲ ದಿನಗಳ ಹಿಂದೆ ಸಮಂತಾ ರುತ್ ಪ್ರಭು ಮತ್ತು ಆಕೆಯ ಪತಿ ರಾಜ್ ನಿಧಿಮೋರು ತಮ್ಮ ಸಂಗಡಿಗರೊಂದಿಗೆ ಕೇಕ್ ಕತ್ತರಿಸುವ ಒಂದು ವಿಡಿಯೋವನ್ನು ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೊಂಡಿದ್ದರು.
ಈ ವಿಡಿಯೋನಲ್ಲಿ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದ ಸಮಂತಾ ದೇಹದಲ್ಲಿ ಮತ್ತು ನಡುವಳಿಕೆಯಲ್ಲಿ ಬದಲಾವಣೆ ಕಂಡುಬಂದಿದೆ ಎನ್ನುವುದು ಈ ವಿಡಿಯೋವನ್ನು ನೋಡಿದವರ ಅಭಿಪ್ರಾಯವಾಗಿದೆ. ಇಲ್ಲಿಂದ ಸಮಂತಾ ಗರ್ಭಧರಿಸಿದ್ದಾರೆ ಎಂಬ ಗುಮಾನಿ ಪ್ರಾರಂಭವಾಗಿದೆ. ಆದರೆ ಈ ಕುರಿತು ಸಮಂತಾ ಅಥವಾ ಆಕೆಯ ಪತಿ ರಾಜ್ ಇಲ್ಲಿವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಫ್ಯಾನ್ಸ್ ಫುಲ್ ಖುಷ್!
ಸಮಂತಾ ಗರ್ಭವತಿ ಆಗಿದ್ದಾರೆ ಎಂಬ ವದಂತಿ ಹಬ್ಬುತ್ತಿದ್ದಂತೆ ಸ್ಯಾಮ್ ಅಭಿಮಾನಿಗಳ ಮನದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಎಂದರೆ ತಪ್ಪಾಗದು. ಅಂತೂ ನಮ್ಮ ಲೇಡಿ ಸೂಪರ್ ಸ್ಟಾರ್ ತಾಯಿ ಆಗಲಿದ್ದಾಳೆ ಎಂದು ಒಬ್ಬ ಅಭಿಮಾನಿ ಕಮೆಂಟ್ ಮಾಡಿದರೆ, ವಿಡಿಯೋ ನೋಡಿದರೆ ಗೊತ್ತಾಗುತ್ತೆ ಸಮಂತಾ ಪಕ್ಕಾ ಗರ್ಭಧರಿಸಿದ್ದಾಳೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಫೋಟೊ ಈ ಅ್ಯಂಗಲ್ನಿಂದ ಕ್ಲಿಕ್ ಆಗಿದ್ದಕ್ಕೆ ಹೀಗೆ ಅನ್ನಿಸುತ್ತಿರಬೇಕು. ಸಮಂತಾ ಗರ್ಭಿಣಿ ಆದರೆ ಅಭಿಮಾನಿಗಳಿಗೆ ಖಂಡಿತ ತಿಳಿಸುತ್ತಿದ್ದರು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಸಮಂತಾಳ ಎರಡನೇ ಮದುವೆ!
2017 ರಲ್ಲಿ ಸಮಂತಾ ತೆಲುಗು ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ಚೈ-ಸ್ಯಾಮ್ ಎಂದು ಕರೆಯುತ್ತಿದ್ದರು. ಆದರೆ, ನಾಲ್ಕು ವರ್ಷಗಳ ವೈವಾಹಿಕ ಜೀವನದ ನಂತರ, ಕೆಲವು ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ 2021ರ ಅಕ್ಟೋಬರ್‌ನಲ್ಲಿ ಈ ದಂಪತಿಗಳು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರು.
ನಂತರ ಡಿಸೆಂಬರ್ 1, 2025 ರಂದು ಸಮಂತಾ ನಿರ್ದೇಶಕ ಹಾಗೂ ನಿರ್ಮಾಪಕ ರಾಜ್ ನಿಧಿಮೋರು ಜೊತೆ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಇವರಿಬ್ಬರು ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಸಮಯದಲ್ಲಿ ಪರಿಚಯವಾಗಿ ನಂತರ ಈ ಸ್ನೇಹ ಪ್ರೀತಿಗೆ ತಿರುಗಿತ್ತು ಎಂದು ಹೇಳಲಾಗುತ್ತದೆ, (ಏಜನ್ಸೀಸ್).