ನಟಿ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಮೈ ಮುಟ್ಟಿದ ನಿರ್ದೇಶಕ ಕೆ. ರಾಘವೇಂದ್ರ ರಾವ್ 
ಟಾಲಿವುಡ್

ಕೀರ್ತಿ ಸುರೇಶ್, ಕೃತಿ ಶೆಟ್ಟಿಗೆ ಮುಹೂರ್ತದಲ್ಲೇ ಮುಜುಗರ! ನಟಿಯರ ಸೊಂಟಕ್ಕೆ ಹೈ ಹಾಕಿದ ರಾಘವೇಂದ್ರ ರಾವ್: ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ! K Raghavendra Rao Controversy

ಪ್ರಮುಖ ಮುಖ್ಯಾಂಶಗಳು

  • ನಟಿ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಮೈ ಮುಟ್ಟಿದ ನಿರ್ದೇಶಕ
  • ತೆಲುಗು ನಿರ್ದೇಶಕ ಕೆ. ರಾಘವೇಂದ್ರ ರಾವ್ ವಿರುದ್ಧ ನೆಟ್ಟಿಗರು ಫುಲ್ ಗರಂ!
  • ಅನಿಲ್ ರವಿಪುಡಿ ನಿರ್ದೇಶನದ ಸಿನಿಮಾ ಮುಹೂರ್ತದಲ್ಲಿ ನಡೆದ ಘಟನೆ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ವೈರಲ್​: ಇತ್ತೀಚೆಗೆ ತೆಲುಗು ಸಿನಿರಂಗದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ (K Raghavendra Rao Controversy) ಅವರದ್ದೊಂದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದೊಡ್ಡ ಮಟ್ಟದ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ. ನಿರ್ದೇಶಕ ಅನಿಲ್ ರವಿಪುಡಿ ಅವರ ಸಿನಿಮಾ ಮುಹೂರ್ತದ ವೇಳೆ ನಡೆದ ಘಟನೆಯೊಂದು ಸದ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಮುಹೂರ್ತದ ಸೆಟ್‌ನಲ್ಲಿ ನಡೆದಿದ್ದೇನು?

ವೆಂಕಟೇಶ್, ನಂದಮೂರಿ ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ನಟಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಅಲ್ಲು ಅರವಿಂದ್, ದಿಲ್ ರಾಜು, ಸುರೇಶ್ ಬಾಬು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿದ್ದರು.

ವಿವಾದಕ್ಕೆ ಕಾರಣವಾದ ನಿರ್ದೇಶಕನ ವರ್ತನೆ!

ವೈರಲ್ ಆಗಿರುವ ವಿಡಿಯೋದಲ್ಲಿ ರಾಘವೇಂದ್ರ ರಾವ್, ಮುಹೂರ್ತದ ಶಾಟ್‌ಗಾಗಿ ನಟ ನಟಿಯರಿಗೆ ಪೊಸಿಷನ್ ವಿವರಿಸುತ್ತಿರುತ್ತಾರೆ. ಮೊದಲು ನಟಿ ಕೀರ್ತಿ ಸುರೇಶ್ ಅವರ ತೋಳನ್ನು ಹಿಡಿದು ಎಳೆಯುವ ಅವರು, ದೃಶ್ಯ ಹೀಗಿರಬೇಕು ಎಂದು ಮಾರ್ಗದರ್ಶನ ನೀಡುತ್ತಾರೆ.
ಆ ಬಳಿಕ ಪಕ್ಕದಲ್ಲೇ ಇದ್ದ ನಟಿ ಕೃತಿ ಶೆಟ್ಟಿ ಅವರ ಕೈ ಹಿಡಿದು ಅದೇ ರೀತಿ ಮಾಡಲು ಮುಂದಾಗುತ್ತಾರೆ. ಇನ್ನು ನಟರಾದ ವೆಂಕಟೇಶ್ ಮತ್ತು ಕಲ್ಯಾಣ್ ರಾಮ್ ಅವರಿಗೂ ಕೈ ಸನ್ನೆ ಮೂಲಕವೇ ದೃಶ್ಯವನ್ನು ವಿವರಿಸುವ ರಾಘವೇಂದ್ರ ರಾವ್, ನಟಿ ಕೃತಿ ಶೆಟ್ಟಿ ಅವರ ಭುಜದ ಮೇಲೆ ಕೈ ಇಡುತ್ತಾರೆ.
ಈ ದೃಶ್ಯಗಳನ್ನು ನೋಡಿದ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಹಿಳಾ ನಟಿಯರನ್ನು ಮುಟ್ಟಿ ನಿರ್ದೇಶನ ಮಾಡುವ ಅಗತ್ಯವೇನಿತ್ತು? ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ನೆಟ್ಟಿಗರು ಫುಲ್ ಗರಂ!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ನಿರ್ದೇಶಕರ ವಿರುದ್ಧ ಕಾಮೆಂಟ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ನಟಿಯರ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ಇಷ್ಟು ವರ್ಷವಾದರೂ ಇವರು ಕಲಿತಿಲ್ಲವೇ? ನಟಿಯರ ಮುಖ ನೋಡಿದರೆ ತಿಳಿಯುತ್ತೆ ಎಷ್ಟು ಹಿಂಸೆ ಆಗುತ್ತಿದೆ ಎಂದು ಒಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ.
ರಾಘವೇಂದ್ರ ರಾವ್ ಅವರೇ, ನಿಮ್ಮ ಈ ನಡವಳಿಕೆ ನಿಜಕ್ಕೂ ಸರಿ ಇಲ್ಲ. ಇಂಥ ವಿಡಿಯೋಗಳು ವೈರಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನಿಹಾರಿಕಾ ಅವರ ವಿಡಿಯೋ ವಿವಾದಕ್ಕೀಡಾದಾಗಲೇ ನೀವು ಬುದ್ಧಿ ಕಲಿಯಬೇಕಿತ್ತು ಎಂದು ಇನ್ನೊಬ್ಬರು ಹೇಳಿದ್ದಾರೆ. ವಿಡಿಯೋನಲ್ಲಿ ಆ ನಟಿಯರಿಗೆ ಎಷ್ಟು ಮುಜುಗರವಾಗುತ್ತಿದೆ ಎಂದು ಅವರ ಹಾವ-ಭಾವಗಳೇ ಹೇಳುತ್ತಿವೆ. ಹಿರಿಯರಾಗಿ ನೀವೇ ಹೀಗೆ ಮಾಡಿದರೆ ಹೇಗೇ ಸರ್​? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಸಪೋರ್ಟ್‌ಗೆ ನಿಂತ ಅಭಿಮಾನಿಗಳು!

ಆದರೆ, ಚಿತ್ರರಂಗದ ಒಂದು ವರ್ಗದ ಜನರು ಮತ್ತು ರಾಘವೇಂದ್ರ ರಾವ್ ಅವರ ಅಭಿಮಾನಿಗಳು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ರಾಘು ಸರ್​ ಚಿತ್ರರಂಗದ ಹಿರಿಯರು, ತಾತನ ವಯಸ್ಸಿನವರು. ಅವರು ಕೇವಲ ಮುಹೂರ್ತದ ದೃಶ್ಯ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ನಟ-ನಟಿಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆಯೇ ಹೊರತು ಇದರಲ್ಲಿ ಯಾವುದೇ ತಪ್ಪು ಉದ್ದೇಶವಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ, (ಏಜನ್ಸೀಸ್​).