ಸಿನಿವಾಣಿ

ಪುಷ್ಪ ಚಿತ್ರಕ್ಕೆ ರಶ್ಮಿಕಾ ಬದಲು ಇನ್ನೋರ್ವ ನಟಿಗೆ ಮೊದಲು ಮಣೆ ಹಾಕಿದ್ದರು ನಿರ್ದೇಶಕರು...

ರಶ್ಮಿಕಾ ಮಂದಣ್ಣ ಸದ್ಯ ಸರಣಿ ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ. ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಮಹೇಶ್ ಬಾಬು ಜತೆಗಿನ 'ಸರಿಲೇರು ನೀಕೆವ್ವರು' ಹಾಗೂ ನಟ ನಿತಿನ್ ಅಭಿನಯದ 'ಭೀಷ್ಮ' ಚಿತ್ರಗಳು ಹಿಟ್​ ಪಟ್ಟಿ ಸೇರಿದ್ದೇ ತಡ, ರಶ್ಮಿಕಾ ಲಕ್​ ಸಹ ಬದಲಾಯ್ತು. ಸಂಭಾವನೆ ವಿಚಾರದಲ್ಲೂ ಅವರು ತುಂಬ ಮುಂದಿದ್ದಾರೆ. ಇಷ್ಟೆಲ್ಲದರ ನಡುವೆಯೂ ಅಲ್ಲು ಅರ್ಜುನ್​ ಜತೆ ಪುಷ್ಪ ಸಿನಿಮಾಕ್ಕೂ ನಾಯಕಿಯಾಗಿ ಆಯ್ಕೆಯಾಗುತ್ತಾರೆ ರಶ್ಮಿಕಾ. ಆದರೆ, ನೆನಪಿರಲಿ ರಶ್ಮಿಕಾ ಆಯ್ಕೆಗೂ ಮುನ್ನ ಸ್ಟಾರ್ ನಟಿಯೊಬ್ಬರಿಗೆ ಆಹ್ವಾನ ಇಟ್ಟಿದ್ದರು ನಿರ್ದೇಶಕ ಸುಕುಮಾರ್​.

ಹೌದು, ರಶ್ಮಿಕಾಗೂ ಮೊದಲು ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್​ಗೆ ಜೋಡಿಯಾಗಿ ಸಮಂತಾ ಅಕ್ಕಿನೇನಿ ನಟಿಸಬೇಕಿತ್ತು. ಮೊದಲಿಗೆ ನೀವೇ ನಾಯಕಿಯಾಗಬೇಕು ಎಂದು ಅವರ ಬಳಿ ಬೇಡಿಕೆ ಇಟ್ಟಿದ್ದರಂತೆ ನಿರ್ದೇಶಕರು. ಆದರೆ, ಕಾರಣಾಂತರಗಳಿಂದ ಅದು ಈಡೇರಲಿಲ್ಲ. ಸಿನಿಮಾದಿಂದ ಒಂದು ಸುದೀರ್ಘ ಬ್ರೆಕ್​ ಬೇಕಾಗಿದ್ದರಿಂದ ಸಿನಿಮಾ ಅವಕಾಶವನ್ನು ಕೈ ಚೆಲ್ಲಿದ್ದರಂತೆ ಸಮಂತಾ. ಅದಾದ ಬಳಿಕ ನಿರ್ದೇಶಕರ ಕಣ್ಣ ಮುಂದೆ ಕಾಣಿಸಿಕೊಂಡವರೇ ರಶ್ಮಿಕಾ ಮಂದಣ್ಣ.

ಸದ್ಯ ರಶ್ಮಿಕಾ ಅಲ್ಲು ಅರ್ಜುನ್​ ಪುಷ್ಪ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಶೂಟಿಂಗ್​ಗೂ ಇನ್ನೇನು ತೆರಳಲಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್​ ವಿಭಿನ್ನ ಪಾತ್ರ ಪೋಷಣೆ ಮಾಡಿದ್ದು, ಅವರಿಗೆ ಪತ್ನಿ ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. (ಏಜೆನ್ಸೀಸ್​)